ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು

ಜೀವನ ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚುತ್ತದೆ. ಹಾಗೆ ಜೀವನವನ್ನು ಸರಳಗೊಳ್ಳಿಸುವ ವಿಧಾನ ಇಲ್ಲಿದೆ!

 1. ಇಷ್ಟವಿಲ್ಲದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಡಿ.
 2. ಎಲ್ಲಾ ಕೆಲಸವನ್ನು ಪರ್ಫೆಕ್ಟ ಅಥವಾ ನಿಖರವಾಗಿ ಮಾಡಲು ಹೋಗಬೇಡಿ.
 3. ಮನೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸರಳವಾಗಿಸಿಕೊಳ್ಳಿ. ಹಾಗು ಅದನ್ನು ಪ್ರತಿ ಬಾರಿಯೂ ಅನುಸರಿಸಿ.
 4. ಫೋನ್, ವಾಟರ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳಿಗೆ ಆನ ಲೈನ ಬಿಲ್ ತುಂಬುವದನ್ನು ರೂಡಿಸಿಕೊಳ್ಳಿ. ಇದು ನಿಮ್ಮ ಸಮಯ ಉಳಿಸುತ್ತದೆ. ಅನಗತ್ಯವಾಗಿ ತಡವಾಗಿದ್ದಕ್ಕೆ ದಂಡ ತುಂಬುವದು ತಪ್ಪುತ್ತದೆ.
 5. ನಿಮ್ಮ ಹಾಡು, ಚಲನಚಿತ್ರ, ಪುಸ್ತಕ ಇತ್ಯಾದಿ ಸಂಗ್ರಹಗಳಲ್ಲಿ ನಿಮಗೆ ತುಂಬ ಇಷ್ಟವಾದುದನ್ನು ಮಾತ್ರ ಇಟ್ಟುಕೊಳ್ಳಿ ಉಳಿದದನ್ನು ಬಿಟ್ಟು ಬಿಡಿ.
 6. ನಿಮ್ಮ ಪರ್ಸ್ ಅನ್ನು ಕ್ಲೀನ್ ಮಾಡಿ. ಅದರಲ್ಲಿ ಅನಗತ್ಯವಾದುದನ್ನು ತೆಗೆದು ಬಿಡಿ.
 7. ನಿಮಗೆ ಬೇಡವಾದ ಪೋಸ್ಟ್ ಗಳನ್ನು ನಾಶಪಡಿಸಿ.ಬೇಡವಾದ ಕಾಲ್, ಎಸ್. ಎಂ.ಎಸ್, ಮೇಲ್ ಗಳ ಮೇಲೆ ಸಮಯ ವ್ಯರ್ಥ ಮಾಡದಿರಿ.
 8. ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಿ.
 9. ನೀವು ಉಪಯೋಗಿಸದ ಮೇಲ ಅಥವಾ ಸೋಶಿಯಲ್ ನೆಟ್ ವರ್ಕ್ ಎಕೌಂಟ್ ಅನ್ನು ಅಳಿಸಿಹಾಕಿ.
 10. ಜಾಹೀರಾತುಗಳು ನಿಮ್ಮ ಫೋನ್ ಗೆ ಬರುತ್ತಿದ್ದರೆ ಅವರಿಗೆ ಇನ್ನು ಮುಂದೆ ಕಾಲ್ ಮಾಡಬಾರದೆಂದು ತಿಳಿಸಿ.
 11. ನಿಮ್ಮ ಕಾರು ಹಾಗು ಬೈಕುಗಳ ಸರ್ವೀಸ್ ಅನ್ನು ಪ್ಲಾನ ಮಾಡಿ. ಅದರ ಪ್ರಕಾರ ಮಾಡುತ್ತಿರಿ.
 12. ನಿಮ್ಮ ಬಿಲ್, ಡಾಕ್ಯುಮೆಂಟ್ ಗಳ ಫೈಲ್ ಮಾಡಿ.
 13. ಪ್ರತಿದಿನ ಬೆಳಿಗ್ಗೆ ಉತ್ತಮ ತಿಂಡಿಯನ್ನು ತಿನ್ನಿ.
 14. ನಿಮಗೆ ಶಾಂತಿ, ನೆಮ್ಮದಿ ಬೇಕಾದಾಗ ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ.
 15. ಒಂದು ಉತ್ತಮ ಗುರಿ ಇಟ್ಟ ಕೊಂಡು ಅದನ್ನು ಸಾಧಿಸಲು ಶ್ರಮ ಪಡಿ.
 16. ನಿಮ್ಮ ಕೆಟ್ಟ ಚಟಗಳನ್ನು ನಿಯಂತ್ರಿಸಲು ಪ್ರಯತ್ನ ಪಡಿ.
 17. ಜಾಹೀರಾತು ನೋಡುವದನ್ನು, ಓದುವದನ್ನು ಕಡಿಮೆ ಮಾಡಿ.
 18. ಸಂತೋಷಕ್ಕಾಗಿ, ಮನೋರಂಜನೆಗಾಗಿ ಓದಿ.
 19. ನಿಮ್ಮ ಡಾಕ್ಟರ್ ಬಳಿ ರೆಗ್ಯುಲರ್ ಆಗಿ ಆರೋಗ್ಯದ ಚೆಕ್ ಅಪ್ ಮಾಡಿ.
 20. ಯಾವಾಗಲೂ ಒಂದು ಕೆಲಸವನ್ನು ಒಮ್ಮೆ ಮಾಡಿ.
 21. ಸಹಾಯಕ್ಕಾಗಿ ಇನ್ನೊಬ್ಬರನ್ನು ಕೇಳಲು ಸಂಕೋಚ ಪಡದಿರಿ.

ಆಧಾರಃ
http://www.onsimplicity.net/2008/07/30-ways-to-make-your-life-more-simple/

ಈ ಲೇಖನ ಹೇಗಿದೆ?: 
ಅಂಕಗಳು: 3.5 (13 ಓಟುಗಳು)

ಲೇಖನದ ಬಗೆ: 

ಅನಿಸಿಕೆಗಳು

vallish rao's picture

ಕೆಟ್ಟ ಚಟ ಬಿಡಬೇಕು ನಿಜ ಆದರೆ ಹೇಗೆ?ನೀವು ಕೊಟ್ಟ ಎಲ್ಲಾ ಸಲಹೆಗಳು different ಆಗಿ ಇದೆ ಎಲ್ಲರೂ ಹೇಳೋ ಹಳೇ ರಾಗ ಇಲ್ಲ.

ವಿ.ಎಂ.ಶ್ರೀನಿವಾಸ's picture

ಒಂದು ಮಾತು ಹೇಳ್ಲಾ ಸಾರ್..!
ನೀವು ಹೇಳಿದ ಅಷ್ಟೂ ವಿಷಯಗಳು, ಗಗನಕುಸುಮಗಳಾಗದೇ, ಸಾಮಾನ್ಯರೂ ಅನುಸರಿಸೋ ಆಗಿವೆ. So ನಿಮ್ಮ ಲೇಖನ ಜನಪರ.
ಸುಂದರ ಲೇಖನಕ್ಕೆ ಧನ್ಯವಾದಗಳು.

chetanbs's picture

ಕೆಲವೊಂದು ಅಂಶಗಳನ್ನು ಪಾಲಿಸುವುದು ಕಷ್ಟವಾದರೂ ಪಾಲಿಸಿದ್ದಲ್ಲಿ ನೆಮ್ಮದಿಯಿಂದ ಬಾಳಬಹುದೆಂಬುದು ನಿಜ..... :)

Raghu-bangalore's picture

another thing which would really help is start running in life... saying goes ... more fitter physically means mentally more fit... :)

kobri mithai's picture

sakkareya haage RAW aagirade, kobri mithai yaMthive!

sudheer's picture

:? ನಿಮ್ಮ ಸಲಹೆಗಳು ತುಂಬಾ ಸರಳವಾಗಿವೆ. ಆದರೆ ಅದನ್ನು ಅಳವಡಿಸಿಕೊಳ್ಳಬೇಕಷ್ಟೆ. ;)

ಅರವಿಂದ 's picture

ರಾಜೇಶ್ ನಿಮ್ಮ ವಿದಾನಗಳು ಸೂಕ್ತ ಹಾಗೂ ಸರಳವಾಗಿವೆ. ಧನ್ಯವಾದಗಳು.

Subscribe to Comments for "ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು"