Skip to main content
Submitted by _V_K_ on ಭಾನು, 07/27/2008 - 12:50
Forums

ಜೀ ಟೀವಿಯ "ಗುಣಗಾನ" ಕಾರ್ಯಕ್ರಮದಲ್ಲಿ ಹೇಮಂತ್ ಮತ್ತು ಪತ್ತು ಪಲ್ಲವಿ ಅವರ ನಡುವೆ ನಿರೂಪಣೆಗೆ ಸಂಬಂಧಿಸಿದಂತೆ co-ordination ಇಲ್ಲ ಎಂದು ನಿಮಗೆ ಅನಿಸುವುದಿಲ್ಲ್ವೇ? ಮತ್ತು ಹೇಮಂತ್ ಅವರ ಬಾಯಲ್ಲಿ "ಬ್ಯಾಂಗಲೋ...ರ್" ಎಂಬುದು ಬಹಳ ಕರ್ಕಶವಾಗಿ ಕೇಳುತ್ತದೆಯಲ್ಲ್ವೇ?
-ಈ ಇಬರೂ ಗಾಯಕರು ಯಾವುದೇ ತಯಾರಿ ಇಲ್ಲ್ದೇ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ತೋರುತ್ತದೆ. ಒಮ್ಮೊಮ್ಮೆ ಇಬ್ಬರೂ ಒಟ್ಟಿಗೆ ಮಾತನಾಡಿ ಕೇಳುಗರಿಗೂ ಗೊಂದಲ ಉಂಟು ಮಾಡುತ್ತಾರೆ. ಹಾಗೆಯೇ ಪಲ್ಲವಿಯವರ ಬಾಲಿಶ questionಗಳೂ ಮತ್ತು ಹಿರಿಯ ಗಾನತಾರೆಗಳಿಗೇ ಮುಜುಗರ ಉಂಟುಮಾಡುವ ಅವರ ಹೊಗಳಿಕೆಗಳೂ ಸುಂದರ ಕಲ್ಪನೆಯ ಕಾರ್ಯಕ್ರಮವೊಂದಕ್ಕೆ ಕಪ್ಪುಚುಕ್ಕೆಯಾಗಿವೆಯೇನೋ ಎಂದೆನಿಸುತ್ತವೆ.

-ಹಾಗೆಯೇ,

ಬ್ರಿಟಿಶರೇನೋ ಅವರ ನಾಲಿಗೆಯ ಧರ್ಮಕ್ಕೆ ಅನುಗುಣವಾಗಿ ಬೆಂಗಳೂರನ್ನು "ಬ್ಯಾಂಗಲೋರ್" ಎಂದು ಕರೆದರು. ಆದರೆ ಇಲ್ಲಿಯೇ ಹುಟ್ಟಿದ ನಮ್ಮ ನಾಲಿಗೆಗೇನಾಗಿದೆ? ನಮ್ಮದೇ ಮಾತುಗಳನ್ನು ಮೂಢಾನುಕರಣೆಯಿಂದ ವಿಕೃತಗೊಳಿಸುತ್ತಿದ್ದೇವೆ ಅಲ್ಲವೇ?

ಆದರೆ ಕನ್ನಡ ಸಂಸೃತಿಯನ್ನು ಪ್ರತಿನಿಧಿಸುವ ಗಾಯಕರೇ ತಪ್ಪುತಪ್ಪಾಗಿ ಉಚ್ಚರಿಸಿದರೆ ಅದಕ್ಕಿಂತ ಸಂತ್ರಸ್ತ ಸ್ಥಿತಿ ಕನ್ನಡಕ್ಕೆ ಬರಲು ಸಾಧ್ಯವಿದೆಯೇ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 771 views