Skip to main content

ನೆರೆ

ನೆರೆ
ಇಂದ prabhu
ಬರೆದಿದ್ದುAugust 20, 2019
noಅನಿಸಿಕೆ

ಒಮ್ಮಿಂದೊಮ್ಮೆಲೆ ಬಂದ ನೀರು
ನುಂಗಿತು ನಮ್ಮ ಊರು |
ಡ್ಯಾಮುಗೀಮು ಒಡೆದೇ ಹೋಯ್ತಾ?
ನಮಗಿಲ್ಲ ಸೂರು ||೧||
ಮುಳುಗೇ ಹೋಯಿತು ನಮ್ಮ ಮನೆ
ಬಿದ್ದೇ ಬಿಟ್ಟಿತು ಪಕ್ಕದ ಮನೆ|
ನೋಡು ಅಮ್ಮ ಎಲ್ಲಡೆ ನೀರು
ಎಲ್ಲರ ಕಣ್ಣಲೂ ಹರಿದಿವೆ ಸುಮ್ಮನೆ ||೨||
ಸಾಕಿದ ನಾಯಿ ಬೆಕ್ಕುಗಳೆಲ್ಲ
ಮುಳುಗುತ ಏಳುತ ಹೊರಟಿಹವು|
ಎತ್ತು ಎಮ್ಮೆ ಕೋಳಿ ಆಡು
ಆಕಳುಕರುಗಳೂ ಒದ್ದಾಡುವವು||೩||
ಹೊಟ್ಟುಮೇವಿನ ಬಣವೆಗಳೆಲ್ಲ
ರಭಸದಿ ತೇಲಿ ಬರುತಿಹವು|
ಹಾವು ಮೊಸಳೆ ಎಲ್ಲವೂ ದಡದೆಡೆ
ಬರುತಲೆ ಭಯವನು ತರುತಿಹವು ||೪||
ಹೊಲದ ಬೆಳೆ ಹೋಯಿತು ಎಂದು
ಸಾಲದ ಚಿಂತೆಯು ಅಪ್ಪನಿಗೆ |
ಕಾಳುಕಡಿ ತೊಯ್ದೆ ಹೋದವು
ನಾಳೆಯ ಚಿಂತೆಯು ಅವ್ವನಿಗೆ ||೫||
ಅಜ್ಜಗೆ ನಸ್ಯದ ಡಬ್ಬಿಯ ಚಿಂತೆ
ಅಜ್ಜಿಗೆ ಚಂಚಿ ಚೀಲದ ಚಿಂತೆ|
ಅಕ್ಕಗೆ ಮೇಕ್ ಅಫ್ ಕಿಟ್ ಚಿಂತೆ
ತಂಗಿಗೆ ಚಾಕಲೇಟ್ ಹೋದ ಚಿಂತೆ ||೬||
ಪಾಟಿಚೀಲ ಪುಸ್ತಕವೆಲ್ಲ
ಸೆಳುವಿಗೆ ಸಿಕ್ಕೆ ಹೋಯಿತೆಲ್ಲ |
ವಿದ್ಯೆಯ ಕಲಿಸುವ ನಮ್ಮ ಶಾಲೆ
ನೆರೆಯಲಿ ಮುಳುಗೆ ಬಿಟ್ಟಿತಲ್ಲ||೭||
ಯಾರೂ ಕೇಳರು ನನ್ನಯ ಗೋಳನು
ಅವರಿಗೆ ಅವರದೆ ಚಿಂತೆ|
ಯಾಕೆ ದೇವರೆ ಹೀಗೆ ಮಾಡಿದೆ
ಮಕ್ಕಳು ಓದದಂತೆ||೮||
ಮಂದಿರ ಮಸೀದಿ ಚರ್ಚುಗಳೆಲ್ಲ
ಮುಳುಗೆ ಹೋದವು ಕ್ಷಣದಲೇ ಎಲ್ಲ|
ಯಾವ ದೇವರೂ ಬರಲೇ ಇಲ್ಲ
ಸೈನಿಕರೇ ದೇವರು ನಮಗೆಲ್ಲ ||೯||
-ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.