Skip to main content

ಅಂಡ್ರಾಯ್ಡನಲ್ಲಿ ಅಜ್ಜಿಯ ಕಷಾಯಗಳು

ಅಂಡ್ರಾಯ್ಡನಲ್ಲಿ ಅಜ್ಜಿಯ ಕಷಾಯಗಳು
ಇಂದ prabhu
ಬರೆದಿದ್ದುJune 4, 2019
noಅನಿಸಿಕೆ

ಅಂಡ್ರಾಯ್ಡನಲ್ಲಿಯೇ ಮೊದಲ ಬಾರಿಗೆ ಪ್ರಕಟಗೊಂಡಿರುವ್ ಕಷಾಯದ ಆಪ್ "ಅಜ್ಜಿಯ ಕಷಾಯಗಳು " ಹೆಸರೆ ಹೇಳುವಂತೆ ಇದೊಂದು ಕನ್ನಡ ಬಾಷೆಯಲ್ಲಿರುವ ಕಷಾಯ ರೆಸಿಪಿ ಆಪ್. ಇದು ವಿವಿಧ ಬಗೆಯ ಕಷಾಯಗಳನ್ನು ಮಾಡುವ ವಿಧಾನಗಳು ಮತ್ತು ಅವುಗಳ ಉಪಯೋಗಗಳನ್ನು ಒಳಗೊಂಡಿದೆ. ಇಂಗ್ಲೀ಼ಷ್ ಮೆಡಿಸೆನ್ ಗಳ ಮೊರೆ ಹೋಗುವದಕ್ಕಿಂತ ನಮ್ಮ ಹಿರಿಯರು ಹಳ್ಳಿಗಳಲ್ಲಿ ಬಳಸುತ್ತಿದ್ದ ದೇಸಿ ಮನೆಮದ್ದುಗಳ ಬಳಕೆ ಉತ್ತಮ ಹಾಗೂ ಆರೋಗ್ಯಕರ. ಈ ಆಪ್ ಕಷಾಯಗಳನ್ನಷ್ಟೇ ಅಲ್ಲದೇ ದೇಸಿ ಪಾನೀಯಗಳು, ಗೊಜ್ಜುಗಳು. ಚಟ್ನಿಗಳು ಹಾಗೂ ವಿವಿಧ ಬಗೆಯ ದೋಸೆಗಳನ್ನು ಮಾಡುವ ವಿಧಾನಗಳು ಮತ್ತು ಅವುಗಳ ಉಪಯೋಗಳನ್ನು ತಿಳಿಸಿಕೊಡಲಾಗಿದೆ.
ಡೌನಲೋಡ್ ಮಾಡುವ ವಿಧಾನ: ಇದು ಗೂಗಲ್ ಪ್ಲೇಸ್ಟೋರ್ ನಲ್ಲಿ ಉಚಿತವಾಗಿ ದೊರೆಯುತ್ತಿದ್ದು ನಿಮ್ಮ ಅಂಡ್ರಾಯ್ಡ ಮೋಬೈಲ್ ನಿಂದ ಪ್ಲೇಸ್ಟೋರ್ ನಲ್ಲಿ "ajjiya kashayagalu" ಎಂದು ಟೈಪ್ ಮಾಡಿ ಹುಡುಕಿದರೆ " wings infotech smk"ಎಂಬ ಡೆವಲಪರ್ ನ "ajjiya kashayagalu" ಆಪ್ ದೊರೆಯುತ್ತದೆ. link:/https://play.google.com/store/apps/details/id=com.my.ajjiyakashayagalu ದೊರೆಯುತ್ತದೆ.
ಈ ಆಪ್ ಅನ್ನು ಮೂಲತ: ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಸಾಗರ ಎಂ ಕಡಪಟ್ಟಿ ನಿರ್ಮಿಸಿದ್ದು , ಎನಿಮೇಷನ್ ಕೋರ್ಸ ಮುಗಿಸಿ ಸ್ವತಂತ್ರವಾಗಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಸದಾ ಕ್ರೀಯಾಶೀಲ ಸಾಗರ ಇನ್ನಷ್ಟು ಹೊಸ ಆಪ್ ಗಳನ್ನು ಆರೋಗ್ಯ ಕುರಿತು ನಿರ್ಮಿಸುತ್ತಿದ್ದು ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಎಲ್ಲರದಾಗಬೇಕಿದೆ.
ವರದಿ-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.