Skip to main content

ಸಂಚಾರ

ಸಂಚಾರ
ಇಂದ prabhu
ಬರೆದಿದ್ದುMarch 6, 2019
noಅನಿಸಿಕೆ

ಹಳಿಗಳ ಮೇಲೆ ಚುಕುಬುಕು ಎಂದು
ಓಡುವ ರೈಲು ನೋಡಮ್ಮ|
ಊರಿ
ಊರಿಂದೂರಿಗೆ ಜನರನು ಹೊತ್ತು
ಓಡುವ ಗಾಡಿಯು ಚಂದಮ್ಮ||೧||
ಪೌಂವ್ ಪೌಂವ್ ಎಂದು ರಸ್ತೆಯ ಮೇಲೆ
ಓಡುವ ಬಸ್ಸು ನೋಡಮ್ಮ|
ಕಂಡಕ್ಟರನು ಸೀಟಿಯ ಹೊಡೆಯಲು
ಬಿಡುವನು ಡ್ರೈವರ್ ಬಸ್ಸಮ್ಮ||೨||
ಟಾಂಗಾ ರಿಕ್ಷಾ ಕಾರು ಟ್ಯಾಕ್ಷಿ
ಸಂಚಾರಕ್ಕೆ ಇವೆಯಮ್ಮ|
ಬೇರೆ ದೇಶಕೆ ಹೋಗಿ ಬರಲು
ವಿಮಾನ ಹಡಗು ಉಂಟಮ್ಮ||೩||
ದೇಶವ ಸುತ್ತಿ ಕೋಶವ ಓದು
ಗುರುಗಳು ಹೇಳಿದ ಮಾತಮ್ಮ|
ಶಾಲೆಯು ರಜೆಯನು ಬಿಟ್ಟೊಡನೆ
ದೇಶವ ಸುತ್ತಿ ಬರೋಣಮ್ಮ||೪||
*ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ: ೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.