Skip to main content

ಬೇಸಿಗೆ

ಬೇಸಿಗೆ
ಇಂದ prabhu
ಬರೆದಿದ್ದುFebruary 28, 2019
noಅನಿಸಿಕೆ

ಅಮ್ಮ ಅಮ್ಮ ಪಾತ್ರೆಯ ಕೊಡು
ನೀರನು ಹಾಕಿ ಮನೆ ಮೇಲಿಡುವೆ|
ಬೇಸಿಗೆ ಬ್ಂತು ಪಕ್ಷಿಗಳಿಗೆ
ಕುಡಿಯಲು ನೀರು ಬೇಕಲ್ಲವೇ?||೧||
ಸುಡುವ ಬಿಸಿಲಿನ ಧಗೆಯು ಹೆಚ್ಚಿದೆ
ನೀರು ಇಲ್ಲ ಎಲ್ಲ ಕಡೆ|
ನದಿ ಕೆರೆ ಹಳ್ಳ ಕೊಳ್ಳ
ಬತ್ತಿ ಬರಿದಾಗಿವೆ ಒಳಗಡೆ||೨||
ಮನುಜರೆ ದಾಹದಿ ಬಳಲುವಾಗ
ಪಕ್ಷಿ ಸಂಕುಲ ಪಾಡೇನು?|
ನೀರನು ಕಾಣುವ ಹಾಗೆ ಇಟ್ಟು
ಅವುಗಳ ದಾಹ ತಣಿಸೋಣ||೩||
ಗಿಡ ಟೊಂಗೆ ಎಲ್ಲೆಂದರಲ್ಲಿ
ನೀರಿನ ಮಡಿಕೆ ಕಟ್ಟೋಣ|
ನಮ್ಮ ಮೇಷ್ಟ್ರು ಹೇಳಿದ ಹಾಗೆ
ಪಕ್ಷಿ ಸಂಕುಲ ಉಳಿಸೋಣ ||೪||
ನಿತ್ಯವೂ ನೀರನು ಕುಡಿಯುತಲೆ
ಇಂಪಿನ ಸ್ವರದಲಿ ಹಾಡುವವು|
ಸ್ನೇಹದ ಪ್ರೀತಿಗೆ ಕರಗುತಲೆ
ಮನಸಿಗೆ ಖುಷಿಯನು ನೀಡುವವು ||೫||
*ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.