Skip to main content

ಇರುವೆ

ಇರುವೆ
ಇಂದ prabhu
ಬರೆದಿದ್ದುFebruary 27, 2019
noಅನಿಸಿಕೆ

ಇರುವೆ ಇರುವೆ ಎಲ್ಲೆಲ್ಲೂ ಇರುವೆ
ಸರ ಸರ ಎಲ್ಲಿಗೆ ಹೊರಟಿರುವೆ?|
ಸರತಿಯ ಸಾಲಲಿ ಸಾಗುತ ನೀ
ಶಿಸ್ತಿನ ಸಿಪಾಯಿ ಆಗಿರುವೆ||೧||
ನೆಲ ಗೋಡೆ ಗಿಡ ಬಳ್ಳಿಗಳ
ಎಲ್ಲೆಂದರಲ್ಲಿ ನೀ ಇರುವೆ|
ಸಿಹಿ ಸಿಹಿ ರುಚಿಗೆ ಮುತ್ತಿಗೆ ಹಾಕಿ
ಸವಿಯನೆ ಮೆಲ್ಲುತ ಇರುವೆ||೨||
ಶೇಂಗಾ ಪುಟಾಣಿ ಖೊಬ್ರಿಗಳೆಲ್ಲ
ರವೆ ಅಕ್ಕಿಗಳಲೂ ಇರುವೆ|
ರೊಟ್ಟಿ ಚಪಾತಿ ಅನ್ನ ಹಾಲಿಗೂ
ತಿನ್ನುವ ಆಹಾರ ಬಿಡದೆ ಬರುವೆ||೩||
ಏನೆ ಮುಚ್ಚಿ ಇಟ್ಟರೂ ಕೂಡ
ಪತ್ತೆದಾರ ನೀ ಇರುವೆ |
ನೀರನೂ ಕೂಡ ಬಿಡದ ಹಾಗೆ
ದಂಡಿನ ದಾಳಿಯ ಮಾಡುವೆ||೪||
ದೇವರ ನೈವೆದ್ಯವೂ ಬಿಡದೆ
ಕ್ಷಣದಲಿ ಮುತ್ತಿಗೆ ಹಾಕುವೆ|
ಕೆಣಕಲು ನಿನ್ನ ಸಿಟ್ಟಲಿ ಕಚ್ಚಿ
ಹಾ ಚುರು ಚುರು ಎನಿಸುವೆ||೫||
ಇರುವೆ ಇರುವೆ ನೀನಿರುವೆ
ನೀನಿಲ್ಲದ ಜಾಗವು ಎಲ್ಲಿವೆ?|
ಆನೆಗಿಂತಲೂ ಜಾಣ ನೀನು
ಅದಕೆ ಸಕ್ಕರೆ ತಿನ್ನುವೆ||೬||
ಬಾಯಲಿ ತಿನಿಸನು ಕಚ್ಚಿಕೊಂಡು
ಗೂಡಿಗೆ ನೀನು ಹೊರಟಿರುವೆ|
ಸಣ್ಣಿರುವೆ ಕಟ್ಟಿರುವೆ ಕೆಂಪಿರುವೆ
ಹಲವು ಪ್ರಭೇದಗಳಲಿ ನೀ ಇರುವೆ||೭||
* ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.