Skip to main content

ಸೂರ್ಯ

ಸೂರ್ಯ
ಇಂದ prabhu
ಬರೆದಿದ್ದುFebruary 26, 2019
noಅನಿಸಿಕೆ

ಯಾಕಣ್ಣ ಸೂರ್ಯ ಬೇಸಿಗೆ ಮೊದಲೆ
ಹೀಗೆ ಉರಿಯೋದು ?|
ಬೆಳಗಿನ ವೇಳೆಯೇ ಸುಡುತ ಬಂದ್ರೆ
ಹೇಗೆ ಬದುಕೋದು? ||೧||
ಕುಳಿತರೂ ನಿಂತರೂ ಸಮಾಧಾನವಿಲ್ಲ
ಜೀವಕೆ ಚಡಪಡಿಕೆಯೆಲ್ಲ|
ನೀರನು ಕುಡಿದರೂ ನೆಮ್ಮದಿಯಿಲ್ಲ
ಬಾಯರಿಕೆ ನೀಗುತ್ತಿಲ್ಲ||೨||
ಹಸಿವು ಹತ್ತಿರ ಸುಳಿಯುತ್ತಿಲ್ಲ
ತಂಪು ಪಾನೀಯ ಬೇಕಲ್ಲ|
ಮಜ್ಜಿಗೆ ಪಾನಕ ಎಳೆ ನೀರಾದರೂ
ಹೊಟ್ಟೆಯ ಕಿಚ್ಚು ಆರುತ್ತಿಲ್ಲ||೩||
ಓದಲು ಬರೆಯಲು ಮನಸೇ ಇಲ್ಲ
ಹಗಲು ರಾತ್ರಿ ನಿದ್ರೆ ಇಲ್ಲ|
ಭೂಮಿಯೇ ಕಾಯ್ದು ಕೆಂಡದ ಹಾಗೆ
ಹೊತ್ತಿ ಉರಿಸಿ ಬಿಟ್ಟೆಯಲ್ಲ||೪||
ಪ್ಯಾನು ಎಸಿ ಬಿಸಿಯೇ ಎಲ್ಲ
ಮರಗಳೂ ಕೂಡ ಅಲಗುತ್ತಿಲ್ಲ |
ಬಿಸಿ ಬಿಸಿ ಗಳಿ ಝಳವನು ತಂದು
ಮೈಯಲಿ ಬೆವರೇ ಹರಸುತ್ತಲ್ಲ||೫||
ನಮಗೆ ಹೀಗಿರೆ ನಿನ್ನ ಗತಿ ಏನು?
ಹೆಂಡತಿ ಮಕ್ಕಳ ಪಾಡೇನು?|
ಛತ್ರಿಯ ನೆರಳು ಬೇಕೇನು?
ಕೂಲ್ಡ್ರಿಂಕ್ಸ್ ತಂದು ಕೊಡಲೇನು?||೬||
ಸಪ್ತ ಕುದುರೆಗಳ ಒಡೆಯನೇ ಕೇಳು
ಉರಿವ ತಾಪವ ಕಡಿಮೆ ಮಾಡು|
ನಮ್ಮಯ ಜೊತೆಗೆ ಆಟಕೆ ಬಾರೋ
ಶಾಲಾ ಬಯಲಲಿ ಕಾಯುವೆ ನೋಡು||೭||
* ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.