Skip to main content

ಚುಕ್ಕಿ

ಚುಕ್ಕಿ
ಇಂದ prabhu
ಬರೆದಿದ್ದುFebruary 24, 2019
noಅನಿಸಿಕೆ

ಚುಕ್ಕಿ ಚುಕ್ಕಿ ಮಿನಗು ಚುಕ್ಕಿ
ಬಾನಿನ ತುಂಬಾ ಹೊಳೆಯುವ ಚುಕ್ಕಿ|
ಹಕ್ಕಿ ಪಿಕ್ಕಿ ರೆಕ್ಕೆ ಬಿಚ್ಚಿ
ಹಾರುವ ಗಗನಕೆ ಸೇರಲು ಚುಕ್ಕಿ||೧||
ಬಣ್ಣದ ಚಿಟ್ಟೆ ಹಾರುವ ತಟ್ಟೆ
ದೇವರೆ ಬರೆದನು ರೆಕ್ಕೆಗೆ ಪಟ್ಟೆ|
ನಡೆಯೆ ಉಟ್ಟು ನವಿಲು ದಟ್ಟೆ
ನೀಲಿಯ ಲೋಕಕೆ ಕಳೆಯನು ಕಟ್ಟೆ||೨||
ನೀಲಿಯ ಕಡಲೆ ನಿನಗಿದೆ ಎಲ್ಲೆ
ಬಾನಿಗೆ ಬರುವೆಯಾ ಜೊತೆಯಲ್ಲೆ|
ಆಡೋಣ ಬಾ ಗೆಳೆಯ ಇಲ್ಲೆ
ಸುರಿವ ಮಳೆಯ ನಡುವಲ್ಲೆ||೩||
ಬಾನಿನ ಕಾಮನ ಬಿಲ್ಲನು ಹಿಡಿದು
ತರುವ ಭೂಮಿಗೆ ಮೆಲ್ಲ|
ಹಸಿರು ಹಣ್ಣಿನ ತೋಟವ ಸೃಷ್ಠಿಸಿ
ನಂದನವನವೆ ಇಲ್ಲೆಲ್ಲ ||೪||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.