Skip to main content

ಸ್ಟ್ರೈಕ್

ಸ್ಟ್ರೈಕ್
ಇಂದ prabhu
ಬರೆದಿದ್ದುFebruary 23, 2019
noಅನಿಸಿಕೆ

ಗುರುಗಳು ಹೊಡೆದ ತಪ್ಪಿಗಾಗಿ
ಮಾಡಿದರ್ಹುಡಗರು ಸ್ಟ್ರೈಕ್|
ಕಲ್ಲು-ಇಟ್ಟಿಗೆ ಮಣ್ಣನು ತೂರಿ
ಒಡೆದರು ಎಲ್ಲ ಕಾಜು ಕಪಾಟು||೧||
ಅಣ್ಣನು ಕೊಡದಿಹ ಪೆನ್ನಿಗಾಗಿ
ತಂಗಿ ಮಾಡಿದಳು ಸ್ಟ್ರೈಕ್|
ಇಂಕನು ಚೆಲ್ಲಿ ಪುಸ್ತಕ ಹರಿದು
ಮಾಡಿದಳು ರಂಪಾಟು||೨||
ಅಪ್ಪನು ಸೀರೆಯ ತರದ ತಪ್ಪಿಗೆ
ಅವ್ವನು ಮಾಡಿದಳು ಸ್ಟ್ರೈಕ್|
ಅಡುಗೆ ಬಿಟ್ಟು ಲಟ್ಟಿಗೆ ಹಿಡಿದು
ಮಾಡಿದಳು ಮಡಿಕೆಗಳ ಸಪಾಟು||೩||
ಗೋಧಿ ಅಕ್ಕಿ ಸಕ್ಕರೆಗಾಗಿ
ಜನರೆಲ್ಲ ಮಾಡಿದರು ಸ್ಟ್ರೈಕ್|
ಬಾಗಿಲು ಮುರಿದು ಒಳಗೆ ನುಗ್ಗಿ
ಚಲ್ಲಿದರೆಲ್ಲ ಸರಾಟು ||೪||
ಸ್ಟ್ರೈಕ್ ಸ್ಟ್ರೈಕ್ ಎಲ್ಲಡೆ ಬಂತು
ದಿಲ್ಲಿಯಿಂದ ಹಳ್ಳಿಗೂ ಬಂತು|
ಸಣ್ಣ ತಪ್ಪೆ ಸ್ಟ್ರೈಕಿಗೆ ದಾರಿ
ಸ್ಟ್ರೈಕೆ ದೇಶಕೆ ಹೆಮ್ಮಾರಿ||೫||
*ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.