ತಾಯಿ ದೇವರು
ಅಮ್ಮ ನಿನ್ನ ಕಂದ ನಾನು
ಎಂಬ ಹೆಮ್ಮೆ ನನಗಿದೆ|
ಸ್ವಾಭಿಮಾನದಿಂದ ಬೆಳೆಸಿ
ಧೈರ್ಯ ಮನದಿ ತುಂಬಿದೆ ||೧||
ಶಿವ ಅಲ್ಲಾ ಏಸು ಎಲ್ಲ
ಬುದ್ದ ಬಸವರು ಒಂದೇ|
ಸತ್ಯ ಅಹಿಂಸೆ ಶಾಂತಿ ಮಂತ್ರ
ಉಸುರಿ ಉಸುರು ತಂದೆ ||೨||
ಜಾತಿಬೇಧ ಎಣಿಸದಂತೆ
ಸರ್ವರೊಳಗೆ ಬೆರೆಸಿದೆ|
ಹಗಲು-ಇರುಳು ತಿದ್ದಿ ತೀಡಿ
ಮನುಜನಾಗಿ ಮಾಡಿದೆ ||೩||
ಕಾಲು ಜಾರಿ ಹೋಗದಂತೆ
ಬದುಕನ್ನು ರೂಪಿಸಿದೆ|
ಹೊಸತು ಜೀವನ ಎಲ್ಲ ಜೇನು
ಸವಿಯುವಂತೆ ಮಾಡಿದೆ||೪||
ತಾಯಿ ದೇವರೆಂದು ಅದಕೆ
ಹಿರಿಯರೆಲ್ಲ ಹೇಳ್ವರು |
ಎಲ್ಲೋ ಇರುವ ನೂರು ದೇವರು
ಎಲ್ಲ ನಿನ್ನಲೆ ಇರುವರು||೫||
* ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೯೭೭೫೩೪೬
ಸಾಲುಗಳು
- 30 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ