ಚಂದಿರ
ಬಾನಲಿ ಬಂದ ಹುಣ್ಣಿಮೆ ಚಂದಿರ
ಹರುಷವ ತಂದ ಲೋಕಕೆ ಸುಂದರ |
ಕಡಲು ಮೊರೆಯಿತು ಅಲೆಗಳ ರಭಸದಿ
ಚಕೋರ ಉಲಿಯಿತು ಮರಗಳ ನಡುವಲಿ||೧||
ಮಗುವು ಕರೆಯಿತು ಕೈಯನು ಚಾಚಿ
ತೋಳಿನ ನಡುವಲಿ ತಬ್ಬಲು ಬಾಚಿ|
ಕಂಡನು ಚಂದಿರ ಬಟ್ಟಲು ನೀರಲಿ
ಹಿಡಿದರೆ ಸಿಕ್ಕನು ಜಾರುವ ಬೆರಳಲಿ||೨||
ಲೋಕವ ಬೆಳಗುವ ಚಂದಿರ ಬಾರೋ
ಚಿಣ್ಣರ ಮನದಲಿ ಹರುಷವ ತಾರೋ|
ಗಣಪನ ಶಾಪವ ಪಡೆದ ಚಂದಿರ
ಶಿವನ ಜಟೆಯಲಿ ಹೊಳೆಯುವ ಸುಂದರ||೩||
ಸಂಜೆ ಆಗಲು ಬೇಗನೆ ಬಂದು
ಮುತ್ತಿದ ಕತ್ತಲೆ ಕಳೆಯೋ ಇಂದು |
ತಾರಾಲೋಕದಿ ಹೊಳೆಯುವ ರಾಜನೆ
ಮಕ್ಕಳ ಪ್ರೀತಿಯ ಚಂದಮಾಮನೆ||೪||
*ರಚನೆ: ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 7 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ