ಪುಟ್ಟ ಕಂದ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬರಲು ಮುದ್ದು ಕಂದ |
ಒಳಗು ಹೊರಗು ಆಡುತಿರಲು
ಮನೆಗೆ ಎಂಥ ಚೆಂದ||೧||
ಹವಳ ತುಟಿಯು ಗೋಧಿ ಬಣ್ಣ
ಬಟ್ಟಲುಗಣ್ಣು ಚೆಂದ |
ಹಾಲುಗೆನ್ನೆ ತುಂಬಿ ನಗುವ
ಮೊಗದಿ ಮಹಾದಾನಂದ ||೨||
ಅಪ್ಪ ಅಮ್ಮ ಅಜ್ಜಿ ಎನುತ
ತೊದಲು ಮಾತಿನಿಂದ|
ಲೋಕವನ್ನೇ ಮರೆಸಿ ಬಿಡುವ
ಯಕ್ಷ ನಮ್ಮ ಕಂದ ||೩||
ಸಣ್ಣ ಪುಟ್ಟ ವಸ್ತುವೆಲ್ಲ
ಬೇಕು ಸುತ್ತ ಆಟಕೆ |
ನೀರೆಂದರೆ ಸಾಕು ನೋಡು
ಧುಮುಕುವ ಚೆಲ್ಲಾಟಕೆ||೪||
ಅಳುವು ನಗುವು ಸಿಟ್ಟು ಸೆಡವು
ಸಕಲವೆಲ್ಲ ಬಲ್ಲ |
ಇಷ್ಟಪಟ್ಟದೆಲ್ಲ ಪಡೆದು
ಗೆದ್ದೆ ಬಿಡುವ ಮಲ್ಲ ||೫||
* ರಚನೆ :ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 24 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ