Skip to main content

ನಮ್ಮೂರ ಬಸ್ಸು

ನಮ್ಮೂರ ಬಸ್ಸು
ಇಂದ prabhu
ಬರೆದಿದ್ದುFebruary 12, 2019
noಅನಿಸಿಕೆ

ಪೌಂ ಪೌಂ ಅಂತ ಬಸ್ಸು ಬಂತು
ಮೊದಲು ಆಗ ನಮ್ಮೂರಿಗೆ|
ನುಗ್ಗೆ ಬಿಟ್ಟರು ಊರಿಗೆ ಹೊಂಟವ್ರು
ರಭಸದಲಿ ಒಳಗೆ||೧||
ಹಳ್ಳಿಗಾಡು ನಮ್ಮಊರು
ಎಲ್ಲೆ ಹೋದರೂ ಕಾಲ್ನಡಿಗೆ|
ಎತ್ತಿನ ಬಂಡಿ ಟ್ರ್ಯಾಕ್ಟರಲ್ಲೇ
ಊರ ಜನರ ಸವಾರಿ ಸಿಟಿಗೆ||೨||
ಆಗೆಲ್ಲ ಊರಿಗೆ ಹೋಗಲು
ಸ್ನೋ ಪೌಡರ ಬೇಕಿಲ್ಲ|
ಬಂಡಿರಸ್ತೆಯ ಧೂಳೆ ಎದ್ದು
ಮುಖಮೈಗೆ ಬಡಿತಿತ್ತಲ್ಲ||೩||
ಊರಾಗೆಲ್ಲ ನಾಲ್ಕಾರ್ ಸೈಕಲ್
ಸಾವ್ಕಾರ ಮಂದಿಗೆ ಡಿಮ್ಯಾಂಡು|
ಮುಳ್ಳು ನೆಟ್ಟು ಪಂಚರಾದ್ರೆ
ಇಮಾಮಸಾಬಿನೇ ಕಮಾಂಡರ್||೪||
ಕಾಲುದಾರಿ ಬಂಡಿದಾರಿ ಈಗಿಲ್ಲ
ಡಾಂಬರ ರಸ್ತೆ ನಮ್ಮೂರಿಗೂ ಬಂತಲ್ಲ|
ಮುಂಜಾನೊಂದು ಸಂಜೆಗೊಂದು ಬಸ್ಸು
ಹೊಟ್ಟೆ ಬಿರಿಯುವಷ್ಟು ಜನ ತಂತಲ್ಲ||೫||
ಬನ್ರಿ ಬನ್ರಿ ಮುಂದಕ್ಕೆ ಬನ್ರಿ
ಅನ್ನೋ ಲೇಡಿ ಕಂಡಕ್ಟರ್|
ನೋಡೋಕಂತ ಹೋಗಿದ್ವು
ನಮ್ಮೂರಿನ ಪಡ್ಡೆ ಹೈಕ್ಳು||೬||
ಈಗೀಗ ನಮ್ಮೂರ ಜನಕೆ
ಸಿಟಿ ಅಂದ್ರೆ ದೂರೇನಲ್ಲ|
ಸಿನೇಮಾ ಹೋಟಲ್ ಎಲ್ಲ ಕಡೆ
ಕಂಡೇ ಕಾಣತಾರಲ್ಲ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.