Skip to main content

ನಮ್ಮ ಮೇಷ್ಟ್ರೇ ಜಾಣರು

ನಮ್ಮ ಮೇಷ್ಟ್ರೇ ಜಾಣರು
ಇಂದ prabhu
ಬರೆದಿದ್ದುFebruary 10, 2019
noಅನಿಸಿಕೆ

ನಮ್ಮ ಶಾಲೆ ಮಾಸ್ತರಷ್ಟು
ಜಾಣ ಅಲ್ಲ ನೀನಪ್ಪ|
ಏನೇ ಕೇಳಿದ್ರೂ ಗೊತ್ತಿಲ್ಲಂತಿ
ಅವ್ವನ್ನ ಕೇಳ್ ಅಂತಿಯಪ್ಪ||೧||
ದೊಡ್ಡ ಶಾಲೆ ಮೇಷ್ಟ್ರ ಅಂತಿ
ಬಾಳ ದಡ್ಡ ಹೌದಪ್ಪ|
ಲೆಖ್ಖ ತಿಳಿಸಿ ಕೊಡು ಅಂದ್ರ
ಅಣ್ಣನ್ನ ಕೇಳ ಅಂತಿಯಪ್ಪ||೨||
ಕಕಂಬಳ್ಳಿ ಹೇಳಿಕೊಡು ಅಂದ್ರ
ಅಕ್ಕನ ಕೇಳು ಅಂತಿಯ|
ವಿಜ್ಞಾನದ ಪಾಠಕ್ಕಂತೂ
ಮಾವನತ್ತ ಕಳಿಸ್ತಿಯ||೩||
ಚಿತ್ರ ಬಿಡಿಸಿ ಕೊಡು ಅಂದ್ರೆ
ನೀನೇ ಬಿಡಿಸು ಅಂತಿಯ|
ಹಾಡನ್ನಾದರೂ ಕಲಿಸು ಅಂದ್ರೆ
ಅಜ್ಜಿ ಕೇಳ ಅಂತಿಯ||೪||
ಆಟ ಆಡೋಣ ಬಾ ಅಂದ್ರೆ
ರೆಸ್ಟ ಬೇಕಂತೀಯ|
ಏನೂ ಗೊತ್ತಿಲ್ಲಪ್ಪ ನಿನಗ
ಅದಕೆ ದಡ್ಡ ಅಪ್ಪಯ್ಯ||೫||
ಕನ್ನಡ ಶಾಲೆ ನಮ್ಮದಾದ್ರೂ
ಕಲಿಸೋದ್ರಲ್ಲಿ ಮುಂದಪ್ಪ|
ನಮ್ಮೇಷ್ಟ್ರಿಗೆ ಎಲ್ಲಾ ಗೊತ್ತು
ಅದಕೆ ಅವರು ಜಾಣರಪ್ಪ||೬||
*ರಚನೆ:ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.