ಗಾಳಿಪಟ
ಅಣ್ಣ ನನಗೆ ಪಟವನು ಮಾಡು
ಬಾನಿಗೆ ಹಾರಿಸುವೆ|
ಸೂತ್ರವ ಬಿಗಿದು ಬಾಲವ ಹಚ್ಚು
ಮೇಲಕೆ ಏರಿಸುವೆ||೧||
ಸೊಯ್ಯನೆ ಗಾಳಿ ಬೀಸುತಲಿ
ರೊಯ್ಯನೆ ಮೇಲೆ ಹೋಗಲಿ|
ಗೆಳೆಯರೆಲ್ಲರ ಪಟಗಳಿಗಿಂತ
ಎತ್ತರದಲ್ಲೇ ಹಾರಲಿ||೨||
ಬಾಲಂಗಸಿಗೆ ರೇಜರ್ ಕಟ್ಟಿ
ಹಾರಿಸೋ ಗೆಳೆಯರುಂಟು|
ಇತರರ ಪಟಕೆ ಡಿಚ್ಚಿ ಹೊಡೆಸಿ
ಹರಿದು ಹಾಕಲು ಸಂಚುಂಟು||೩||
ಗಾಳಿಯ ರಭಸಕೂ ಬಗ್ಗದ ಹಾಗೆ
ದಂಟಿನ ಸಿಬಿರಿಗೆ ಅಂಟನು ಲೇಪಿಸು|
ಗಟ್ಟಿ ನೂಲಿನ ದಾರವ ಜೋಡಿಸು
ತಂಟೆಕೋರರಿಗೆ ಬುದ್ದಿ ಕಲಿಸು||೪||
ಬಣ್ಣ ಬಣ್ಣದ ಗಾಳಿಯ ಪಟಗಳು
ತೂಗುತ ಬಾಗುತ ಹಾರಲಿ|
ಚಿಣ್ಣ್ರರ ಕನಸನು ಬಾನಿಗೆ ಒಯ್ಯುತ
ನಮ್ಮನು ಖುಷಿಯಲಿ ನಲಿಸಲಿ||೫||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 14 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ