Skip to main content

ನಾನು ಹೆಣ್ಣು

ನಾನು ಹೆಣ್ಣು
ಇಂದ prabhu
ಬರೆದಿದ್ದುFebruary 6, 2019
noಅನಿಸಿಕೆ

ಅಜ್ಜಿ ನಾನು ಹೆಣ್ಣು ಅಂತ
ಅವ್ವನ್ನೇಕೆ ಬೈಯ್ತಿಯಾ?|
ನೀನೂ ಹೆಣ್ಣು ಅನ್ನೋದನ್ನ
ಮರೆತು ಬಿಟ್ಟು ಒದರ್ತೀಯ||೧||
ಅವ್ವ ನಾನು ಹೆಣ್ಣಾದೆಂತ
ಅಳುವೆ ಏಕವ್ವ|
ನಾನೇ ಗಂಡುಮಗು ಅಂತ
ತಿಳಿದು ಬಿಡವ್ವ||೨||
ಅಜ್ಜ ಅಜ್ಜಿ ಬೈತಾರಂತ
ಕಿನ್ನತೆ ಬೇಡವ್ವ|
ಅಪ್ಪ ನಿನ್ನ ಜೊತೆಗಿರುವಾಗ
ಭಯವು ಯಾಕವ್ವ?||೩||
ಗಂಡಾದರೆ ಮನೆಯ ದೀಪ
ಎನ್ನುವ ಜನಗಳಿಗೆ|
ಮನೆಯ ಬೆಳಗುವವಳು ಹೆಣ್ಣು
ತಿಳಿಯದೇ ಮೂಢರಿಗೆ||೪||
ಮಗನಾದರೆ ಕೀರ್ತಿ ತರುವ
ಹಿರಿಯರ ನಂಬಿಕೆ ತಾನೆ?
ನಾನೂ ಓದಿ ಜಾಣಳಾಗ್ತೀನಿ
ಕೀರ್ತಿ ತರ್ತೀನಿ ನಾನೆ||೫||
ಓಬವ್ವ ಚೆನ್ನಮ್ಮ ಬೆಳವಡಿ ಮಲ್ಲಮ್ಮ
ಸಾಹಸ ತೋರಿದ ಮಹಿಳೆಯರು|
ದೇಶದ ಉನ್ನತಿಯಲ್ಲಿ ದುಡಿದ
ಹೆಸರಿವೆ ನೂರಾರು||೬||
ಹೆಣ್ಣು ಹುಣ್ಣು ಅನ್ನೋದ ಬಿಡಿ
ಅವಳೆ ಕುಟುಂಬದ ಕಣ್ಣು|
ಬ್ರೂಣಹತ್ಯೆ ಮಹಾಪಾಪ
ಆದರೆ ತಿನ್ನುವಿರಿ ಮಣ್ಣು||೭||
ಅಕ್ಕ ತಂಗಿ ಅಮ್ಮ ಮಗಳು ಅತ್ತೆ ಹೆಣ್ಣು
ಆದರೂ ಬೇಡ ಏಕೆ ಹೆಣ್ಣು|
ಸೃ಼ಷ್ಟಿಮೂಲ ಅವಳೆ ಅರಿಯಿರಿ
ಅವಳಲ್ಲವೆ ಜಗದ ಕಣ್ಣು||೮||
ಎಲ್ಲ ರಂಗಗಳಲಿ ಹೆಣ್ಣು ಮುಂದು
ಅಬಲೆಯಲ್ಲ ಸಬಲೆಯವಳು|
ಜೀವನೀಡಿ ಜೋಪಾನ ಮಾಡುವ
ಪ್ರೀತಿ ಮಮತೆ ತ್ಯಾಗದ ಹೊನ್ನವಳು||೯||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.