Skip to main content

ಹಬ್ಬದ ಊಟ

ಹಬ್ಬದ ಊಟ
ಇಂದ prabhu
ಬರೆದಿದ್ದುFebruary 5, 2019
noಅನಿಸಿಕೆ

ಸಜ್ಜೆಯ ರೊಟ್ಟಿ ಪುಂಡಿಯ ಪಲ್ಯೆ
ಎಣ್ಣೆಯ ಹಾಕಿ ಕೊಡಮ್ಮ|
ಅಗಸಿ ಚಟ್ನಿ ಸ್ವಲ್ಪವೇ ಇರಲಿ
ಪಲ್ಯ ಪಚಡಿ ನೀಡಮ್ಮ||೧||
ಹೂರಣ ಹೋಳಿಗೆ ಕರ್ಚಿಕಾಯಿಗೆ
ತುಪ್ಪವ ಜಾಸ್ತಿ ಹಾಕಮ್ಮ|
ಉಪ್ಪಿನಕಾಯಿ ಹಪ್ಪಳ ಸಂಡಿಗೆ
ಭಜಿಯ ಜೊತೆಗೆ ಇರಲಮ್ಮ||೨||
ಬಳ್ಳೊಳ್ಳಿ ಮೊಸರು ಕಲಿಸಿದ ಬಾನದ
ಅನ್ನದ ಉಂಡೆಯ ನೀಡಮ್ಮ|
ಕೊನೆಯಲಿ ಉಳಿಯುವ ಸ್ವಲ್ಪ ಅನ್ನಕೆ
ಕಟ್ಟಿನ ಸಾರು ಹಾಕಮ್ಮ||೩||
ಮನೆಯವರೆಲ್ಲ ಸಾಲಲಿ ಕುಳಿತು
ಉಣ್ಣೋದೆ ಬಲು ಸೊಗಸಮ್ಮ|
ಭರ್ಜರಿ ಊಟವು ಮುಗಿದ ಮೇಲೆ
ಮಜ್ಜಿಗೆ ಕುಡಿಯಲು ಕೊಡಮ್ಮ||೪||
ನಿನ್ನ ಕೈರುಚಿ ಅಡಿಗೆಯ ಸವಿಯಲು
ಹಬ್ಬವು ಬೇಗನೆ ಬರಲಮ್ಮ|
ಎಲೆ ಅಡಿಕೆಯ ಮೆಲ್ಲುತ ಎಲ್ಲರೂ
ನಗುತಲೆ ನಾವು ಬಾಳೋಣ ||೫||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.