Skip to main content

ನನ್ನ ಗೊಂಬೆ

ನನ್ನ ಗೊಂಬೆ
ಇಂದ prabhu
ಬರೆದಿದ್ದುFebruary 4, 2019
noಅನಿಸಿಕೆ

ಅಪ್ಪಗೆ ಹೇಳುವೆ ಸುಮ್ಮನೆ ಕೂಡು
ಹಠ ಮಾಡುತ ಏಕೆ ಕಾಡಿಸುವೆ|
ಎಣ್ಣೆಯ ಹಚ್ಚಿ ತಲೆಯನು ಬಾಚಿ
ದುಬು ದುಬು ಜಳಕವ ಮಾಡಿಸುವೆ||೧||
ಟೂತ್ ಪೇಸ್ಟಲಿ ಹಲ್ಲು ಉಜ್ಜುತ
ಕೈಕಾಲುಗಳ ತಿಕ್ಕುವೆನು|
ಕಣ್ಣಲಿ ಸೋಪು ಸೇರದ ಹಾಗೆ
ಮುಚ್ಚಿಕೊ ಗಟ್ಟಿ ಕಣ್ಣನು||೨||
ಉಗುರು ಬೆಚ್ಚಗಿನ ನೀರು ಸುರಿಯುವೆ
ಸ್ನಾನಕೆ ಹಠವು ಯಾಕೆ?|
ನಿತ್ಯವೂ ಸ್ನಾನವ ಮಾಡದಿದ್ದರೆ
ಯಾರೂ ಎತ್ತಿಕೊಳ್ಳರು ಜೋಕೆ||೩||
ಲಂಗ ದಾವಣಿ ಹೊಸದು ಹಾಕಿ
ಪೌಡರ ಹಚ್ಚಿ ಕುಂಕುಮ ಇಡುವೆ|
ಯಾರ ಕಣ್ಣು ಬೀಳದ ಹಾಗೆ
ಕೆನ್ನೆಗೆ ಕಾಡಿಗೆ ಬೊಟ್ಟಿಡುವೆ||೪||
ಅಯ್ಯೊ ಪಾಪ ಹೊಟ್ಟೆ ಹಸಿವಾ
ಅಳಬೇಡ ನೀನು|
ಅಮ್ಮನು ಮಾಡಿಹ ಬಿಸಿ ಬಿಸಿ ದೋಸೆ
ತಿನ್ನೋಣ ನಾವು||೫||
ಜಾತ್ರೆಯ ವೇಳೆ ನೋಡಿದ ತಕ್ಷಣ
ಕೊಡಿಸಿದ ಅಪ್ಪ ನಿನ್ನನ್ನು|
ಬಾರ್ಬಿಗೊಂಬೆ ಆದರೆ ಏನು
ಜೀವದ ಗೆಳತಿ ನನಗಿನ್ನು||೬||
ಮನೆಯಲಿ ಯಾರಿಗೂ ಪುರುಸೊತ್ತಿಲ್ಲ
ಎಲ್ಲರೂ ತಮ್ಮ ಕೆಲಸದಲಿರುವ|
ನಾನು ನಿನ್ನಯ ಜೊತೆಗೆ ಇರುವೆ
ಸಿಟ್ಟು ಸೆಡವು ಬೇಡ ಪಾಪುವೆ||೭||
ಹಾಲನು ಕುಡಿದು ಓದಲು ನಾವು
ಕನ್ನಡ ಶಾಲೆಗೆ ಹೋಗೋಣ|
ಟೀಚರ್ ಹೇಳುವ ಪಾಠವ ಕೇಳಿ
ಬೇಗನೆ ಜಾಣರಾಗೋಣ ||೮||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.