Skip to main content

ಮಕ್ಕಳ ಆಟ

ಮಕ್ಕಳ ಆಟ
ಇಂದ prabhu
ಬರೆದಿದ್ದುFebruary 3, 2019
noಅನಿಸಿಕೆ

ಶೆಟ್ಟರು ಮನೆಯ ಕಟ್ಟಲು ಹಾಕಿದ
ಉಸುಕಿನ ಗುಂಪೆಯಲಿ|
ಸೇರಿತು ಗೆಳೆಯರ ಗುಂಪು
ವಾರದ ರಜೆಯಲ್ಲಿ||೧||
ಕಾಲನು ಇಟ್ಟು ಪಟ ಪಟ ಬಡಿದು
ಮನೆಯನು ಕಟ್ಟಿದರು|
ಹನುಮ ಶಾರಿ ಅಪ್ಪ ಅಮ್ಮರು ಆಗಿ
ಆಟವ ಆಡಿದರು||೨||
ಸಿದ್ದು ರೋಜಿ ಕಾಶಿ ಪಾತು
ನೆರೆಮನೆ ಕುಟುಂಬವು|
ಏನೇ ಅಡುಗೆ ಮಾಡಲಿ ಮನೆಯಲಿ
ಎಲ್ಲರೂ ಹಂಚಿಯೇ ತಿನ್ನುವರು||೩||
ಅಪ್ಪನು ಸಿಟ್ಟಲಿ ಅಮ್ಮಗೆ ಬಯ್ದನು
ಅಮ್ಮನು ಕುಕ್ಕರ್ ಕುಕ್ಕಿದಳು|
ಅಡುಗೆಯ ಮಾಡದೆ ರೂಮಲಿ ಸೇರಿ
ಚಾದರ ಹೊದ್ದು ಮಲಗಿದಳು||೪||
ಇಬ್ಬರ ಜಗಳ ಬಿಡಿಸಲು ಆಗಲೇ
ನೆರೆಯವರೆಲ್ಲ ಸೇರಿದರು|
ಹೇಳಿದ ಮಾತು ಕೇಳದೆ ಇಅವ್ರು
ಬಂದವರೆದುರೆ ಎಳೆದಾಡಿದರು||೫||
ಬೈಗುಳ ಎಲ್ಲೆ ಮೀರುತ ಸಾಗಿ
ಕೈಕೈ ಹಿಡಿದು ಬಡಿದಾಡಿದರು|
ಒಬ್ಬರ ಒಬ್ಬರು ತಳ್ಳುತ ಹೋಗಿ
ಮನೆಯನು ಕಚಪಚ ತುಳಿದಾಡಿದರು||೬||
ಆಗಲೆ ಬಂದರು ಶೆಟ್ಟರು ನೋಡಿ
ಓಡಿದರೆಲ್ಲ ದಿಕ್ಕುಪಾಲಾಗಿ |
ಮಕ್ಕಳ ಆಟ ಮುಗಿದು ಹೋಗಿ
ರಜೆಯೇ ಕಳೆಯಿತು ಮೋಜಿನಲಿ||೭||
*ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.