Skip to main content

ರಜೆ

ರಜೆ
ಇಂದ prabhu
ಬರೆದಿದ್ದುFebruary 2, 2019
noಅನಿಸಿಕೆ

ಶಾಲೆಗೆ ನಾಳೆ ರಜೆ ಇದೆಯಮ್ಮ
ಅಲಾರಾಮ್ ಇಡಬೇಡ|
ಹುಂಜವು ಕೂಗದ ಹಾಗೆ ಹೇಳು
ಮಲಗುವೆ ಹೆಚ್ಚು ಹೊತ್ತಮ್ಮ||೧||
ವಾರದ ಆರು ದಿನಗಳು ನನಗೆ
ರೆಸ್ಟೇ ಇಲ್ಲ ಕಣಮ್ಮ|
ಶಾಲೆ ಓದು ಬರಹ ಇಷ್ಟೇ
ಪರೀಕ್ಷೆ ಬಂತು ನೋಡಮ್ಮ||೨||
ನೆಗಡಿ ಕೆಮ್ಮು ಜ್ವರಗಿರ ಬರದ
ಹಾಗೆ ಎಚ್ಚರ ಬೇಕಮ್ಮ|
ನಿನ್ನದೆ ಕಷ್ಟ ನಿನಗಿರುವಾಗ
ನನ್ನದು ಸುಮ್ಮನೆ ಹೊರೆಯಮ್ಮ||೩||
ಬೆಳಗಿನಿಂದ ಮಲಗೋವರೆಗೂ
ಬಿಡದೇ ಕೆಲಸ ನಿನಗಮ್ಮ|
ನೀನೂ ನನ್ನ ಜೊತೆಗೆ ಇದ್ದು
ರಗ್ಗು ಹೊದ್ದು ಮಲಗಮ್ಮ||೪||
ಅಪ್ಪಗೆ ಕೆಲಸಕೆ ರಜೆ ಉಂಟು
ಅಣ್ಣಗೆ ಕಾಲೇಜ್ ಇಲ್ಲಮ್ಮ|
ಎಲ್ಲರೂ ಜಾತ್ರೆಗೆ ಹೋದರಾಯ್ತು
ಅಪ್ಪನ ರಮಿಸಿ ಒಪ್ಪಿಸಮ್ಮ||೫||
ಅಲ್ಲಿ ಇಲ್ಲಿ ಏನೂ ನಾನು
ಕಾಡಿಸಿ ಕೇಳೋದಿಲ್ಲಮ್ಮ|
ನೀನು ಅಪ್ಪ ಏನೇ ಕೊಡಿಸಲಿ
ತೆಗೆದುಕೊಳ್ಳುವೆ ನಾನಮ್ಮ|೬||
ಆದರೂ ಅಪ್ಪಗೆ ಹೇಳು ನೀನು
ಜೇಬಲಿ ದುಡ್ಡು ಹೆಚ್ಚಿರಲಿ|
ಯಾರ ಹತ್ತಿರ ಇರದ ವಸ್ತು
ಅಪ್ಪ ನನಗೆ ಕೊಡಿಸಲಿ||೭||
*ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.