Skip to main content

ನೈವೇದ್ಯ

ನೈವೇದ್ಯ
ಇಂದ prabhu
ಬರೆದಿದ್ದುFebruary 1, 2019
noಅನಿಸಿಕೆ

ಹಲ್ಲು ಬಿದ್ದರೆ ಏನಾಯ್ತಮ್ಮ
ನನಗೆ ಊಟಕೆ ಕೊಡಮ್ಮ|
ದೇವರ ಪೂಜೆ ಆಗೋವರೆಗೂ
ತಾಳೆನು ಹಸಿವು ನಾನಮ್ಮ||೧||
ಹಪ್ಪಳ ಸಂಡಿಗೆ ಉಪ್ಪಿನ ಕಾಯಿ
ಹುಗ್ಗಿ ಹೋಳಿಗೆ ಮಾಡುವೆ|
ಹಬ್ಬ ಹುಣ್ಣಿಮೆ ಅಮವಾಸ್ಯೆಯಲಿ
ನೈವೇದ್ಯ ದೇವರಿಗೆ ಕೊಡುವೆ||೨||
ಅಮ್ಮ ನನಗೆ ಕೊಡು ಎಂದರೆ
ಎಂಜಲು ಎಂದೆ ಹೇಳುವೆ|
ದೇವರು ನೀಡಿದ ಕೊಡುಗೆ ನೀನು
ಎಂದೆ ನನ್ನ ರಮಿಸುವೆ||೩||
ನನ್ನ ಪಾಲಿನ ದೇವರೇ ನೀನು
ಎಂದೇ ಹೇಳುವೆ ನನ್ನಮ್ಮ|
ಉಣ್ಣದ ತಿನ್ನದ ದೇವರಿಗೇಕೆ
ಮೊದಲು ಎಡೆಯು ಬೇಕಮ್ಮ||೪||
ಅಣು ಕಣಗಳ ಎಲ್ಲಡೆ
ದೇವರಿರುವ ಎನ್ನುವೆ|
ಭಕ್ತಿಯಿಂದ ಅವನ ಬೇಡಲು
ಎಲ್ಲ ಕೊಡುವನು ಹೌದಲ್ಲವೇ?||೫||
ಅವನೇ ಕೊಟ್ಟ ಕರುಣೆ ಕಂದ
ನನು ತಾನೇ ಅಲ್ಲವೇ?|
ಹಸಿದ ನನ್ನ ಹೊಟ್ಟೆಯ ಗುಟ್ಟು
ಆ ದೇವರಿಗೆ ತಿಳಿಯದೇ?||೬||
ದೇವರಿಗೆ ಎಡೆಯ ಬೇರೆ ಇಟ್ಟು
ನನಗೆ ಊಟಕೆ ಹಾಕಮ್ಮ|
ತಮ್ಮನ ಹಲ್ಲು ಬೀಳದ ಹಾಗೆ
ನೀನು ದೇವಗೆ ಕೇಳಮ್ಮ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.