Skip to main content

ಮತದಾನ ಜಾಗೃತಿ

ಮತದಾನ ಜಾಗೃತಿ
ಇಂದ prabhu
ಬರೆದಿದ್ದುJanuary 31, 2019
noಅನಿಸಿಕೆ

ನಮ್ಮ ಹಕ್ಕು ನಮ್ಮ ಮತ
ಚಲಾಯಿಸೋದೆ ನಮಗೆ ಹಿತ|
ತಪ್ಪದಂತೆ ಹಾಕೋಣ
ಅವರಿವರ ಜೊತೆ ಹೋಗುತ||೧||
ಜಾತಿ ಧರ್ಮ ಗೊಡವೆ ಬೇಡ
ಪಕ್ಷ ಚಿಹ್ನೆ ನೋಡ ಬೇಡ|
ದೇಶದ ಹಿತ ಕಾಯುವವರ
ಆರಿಸೋದು ಮರೆಯಬೇಡ||೨||
ಚುನಾವಣೆಗೆ ವೇಷ ಬದಲಿಸೋ
ಪೊಳ್ಳು ಭರವಸೆ ಅಭ್ಯರ್ಥಿ ಬೇಡ|
ಕಾಲು ಕೈ ಮುಗಿದು ಬರುವ
ಹಸುಮುಖದ ಹೆಬ್ಬುಲಿ ಬೇಡ||೩||
ಸೀರೆ ಬೆಡ ಪಂಚೆ ಬೇಡ
ಮಿಕ್ಸಿ ಗ್ರೈಂಡರ ಕುಕ್ಕರ ಬೇಡ|
ದುಡ್ಡು ಸಾರಾಯಿ ಆಮಿಸೆಗಾಗಿ
ನಮ್ಮನ್ನ ನಾವು ಮಾರ್ಕೋಳ್ಳೋದ್ಬೇಡ||೪||
ಕೊಡುವ ಉಡುಗೊರೆ ಒಂದೇ ಸಾರಿ
ಆರಿಸಿದ ಮೇಲೆ ನೋಡರು ನಿಮ್ಮತ್ತ|
ದೇಶ ನಮ್ಮನು ಉದ್ಧರಿಸೋ ಅಭ್ಯರ್ಥಿ
ಮತನೀಡಿ ಉಳಿಸಿ ಪ್ರಜಾಪ್ರಭುತ್ವ ||೫||
ಸರಕಾರದ ಸೌಲತ್ತು ಪುಕ್ಕಟೆ ಬೇಕು
ಮತಹಾಕಲು ಯಾಕೆ ಹಿಂದೇಟು|
ಮತದಾರರೆ ನೀವೇ ಪ್ರಭುಗಳು
ನಿಮ್ಮ ಮತ ಹಾಕಿ ಹೆಜ್ಜೆ ಮುಂದಿಟ್ಟು||೬||
ಭಯವಿದ್ದರೆ ಬಿಟ್ಟು ಬನ್ನಿ
ಎಲ್ಲರೂ ಪ್ರತಿಜ್ಞೆ ಮಾಡೋಣ|
ಜನಜಾಗೃತಿ ಜಾಥಾ ಮಾಡುತ
ಮತದಾನಕೆ ಶ್ರಮಿಸೋಣ ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.