Skip to main content

ಭಯ

ಭಯ
ಇಂದ prabhu
ಬರೆದಿದ್ದುJanuary 28, 2019
noಅನಿಸಿಕೆ

ಅಮ್ಮ ನೋಡು ನನಗೆ ಯಾಕೋ
ಕಣ್ಣೆ ಕಾಣ್ತಿಲ್ಲ|
ಏನೇ ನೋಡಲಿ ಮಸುಕು ಮಸುಕು
ವಸ್ತು ಗೋತ್ತಾಗ್ತಿಲ್ಲ||೧||
ರಾತ್ರಿ ಮಲಗೋವಾಗ ಎಲ್ಲ
ಚನ್ನಾಗೆ ಇತ್ತು|
ಟಿವಿ ಬಹಳ ನೋಡಿದ್ದಕ್ಕೆ
ಹೀಗಾಯ್ತಾ ಮತ್ತು||೨||
ಹಾಸಿಗೆಯಿಂದ ಏಳೋದಕ್ಕೂ
ಆಗ್ತಿದೆ ಭಯ|
ಮೇಜು ಖುರ್ಚಿ ಗೋಡೆ ತಗುಲಿ
ಆಗುತ್ತೇನೋ ಗಾಯ? ||೩||
ಅಮ್ಮ ನಿನ್ನ ಮಾತು ಕೇಳದೆ
ಇರದ್ದಕ್ಕೆ ಹೀಗಾಯ್ತಾ?|
ನಿನ್ನ ಕಾಡಿಸಿ ಪೀಡಿಸಿದ್ದಕ್ಕೆ
ದೇವರು ಕೊಟ್ಟ ಶಿಕ್ಷೇನಾ?||೪||
ಸಾರಿ ಮಮ್ಮಿ ದೇವರಿಗೆ ಕೇಳು
ಮಗಳಿಗೆ ಕಣ್ಣು ಕೊಡು ಅಂತ|
ಇನ್ನೆಂದೂ ನಿನ್ನ ಕಾಡೋದಿಲ್ಲ
ಜೀವನ ಪರ್ಯಂತ||೫||
ಎದ್ದು ಬಾರೆ ಹಾಸಿಗೆ ಬಿಟ್ಟು
ಏನೂ ನಿನಗಾಗಿಲ್ಲ|
ಅಜ್ಜನ ಚಸ್ಮಾ ಹಾಕ್ಕೊಂಡ್ರೆ
ಆಗೋದೇ ಹೀಗೆಲ್ಲ||೬||

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.