Skip to main content

ಕಾಡು ಬೆಳಸು

ಕಾಡು ಬೆಳಸು
ಇಂದ prabhu
ಬರೆದಿದ್ದುJanuary 25, 2019
noಅನಿಸಿಕೆ

ಕೇಳು ಗೆಳೆಯನೆ ಕೇಳು
ಅಕ್ಕರೆಯಲಿ ಹೇಳುವೆ ಕೇಳು|
ಜೀವಕೆ ಜಲವು ಬೇಕಲ್ಲವೇ
ಮರಗಿಡಗಳ ಬೆಳಸಲು ಹೇಳು||೧|||
ಗಿಡ ಮರಗಳಾ ಬೆಳೆಸೋ
ಮೋಡಗಳ ಇಳೆಗೆ ಇಳಿಸೋ|
ಹಸಿರೆ ಹಸಿರು ನಾಡಾಗಿಸೋ
ಬರವನು ಅಲ್ಲೆ ಅಟ್ಟಿಸೋ||೨||
ಕಾಡನು ಕಡಿದು ನಾಡನು ಕಟ್ಟುವ
ಬೆಟ್ಟವ ಅಗಿದು ಅದಿರನು ತೆಗೆಯುವ|
ನೀರಿಗಾಗಿ ಭೂಮಿ ಕೊರೆಯುವ
ಮನುಜರ ಮರಣಕೆ ದಾರಿ ಮಾಡುವ||೩||
ಹೊಗೆಯನು ಉಗುಳುವ ವಾಹನಗಳು
ವಿಷ ನೀರಿಗೆ ಬೆರಸೋ ಕಾರ್ಖಾನೆ|
ವಾಯು ಜಲಗಳಾ ಮಾಲಿನ್ಯ
ಆಶ್ರಯ ಕೊನೆಗೆ ದವಾಖಾನೆ||೪||
ವಿಜ್ಞಾನಿಗಳ ಎಚ್ಚರಿಕೆಯು
ಕೇಳದ ಅಜ್ಞಾನಿಗಳು ನಾವು|
ಕರಗುತಿವೆ ನಿರ್ಗಲ್ಲುಗಳು
ತೂತಾಗುತಿದೆ ಓಜೋನು||೫||
ಪರಿಸರ ರಕ್ಷಣೆಗೆ ಮುಂದಾಗಿ
ಇಲ್ಲ, ಕಾದಿದೆ ಘೋರ ಸಾವು|
ಇಳೆಯೇ ಅಸ್ತಿಯ ಬೋನು
ಇಷ್ಟಾಗಿಯೂ ಎಳದಿರೆ ನಾವು||೬||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.