ಬೆಕ್ಕು
ನಮ್ಮ ಮನೆಯ ಮುದ್ದಿನ ಬೆಕ್ಕು
ಅದಕ್ಕಿಲ್ಲ ಸೊಕ್ಕೆಷ್ಟು|
ಹಾಲು ಬೆಣ್ಣೆ ಎದುರಿಗೆ ಇದ್ದರೂ
ಮುಟ್ಟೋದಿಲ್ಲ ಎಷ್ಟೆಷ್ಟು||೧||
ಚಂಗನೆ ಜಿಗಿವ ಇಲಿಯ ಕಂಡರೆ
ತಲೆಗೇರುತ್ತೆ ಸಿಟ್ಟು|
ಟಣ್ಣನೆ ಹಾರಿ ಹಿಡಿದುಕೊಂಡು
ಬಿಡದು ತನ್ನ ಪಟ್ಟು||೨||
ಅಮ್ಮನ ಸುತ್ತ ಸುತ್ತಿ ಸುಳಿದು
ಮಿಯಾಂವ್ ಮಿಯಾಂವ್ ಅನ್ನುತ್ತೆ|
ಸಿಟ್ಟಿನಿಂದ ಅಮ್ಮ ಬೈದರೆ
ಪೆಚ್ಚು ಮೋರೆ ಹಾಕುತ್ತೆ||೩||
ಶಾಲೆಗೆ ನಾವು ಹೋಗೋ ವೇಳೆ
ಬಾಗಿಲವರೆಗೂ ಬರುತ್ತೆ|
ತಟ್ಟಿ ಮುಟ್ಟಿ ಪಪ್ಪಿಕೊಟ್ಟು
ಟಾಟಾ ಹೇಳಬೇಕು ಮತ್ತೆ||೪||
ಹಾಲು ಬ್ರೆಡ್ ನಮ್ಮ ಜೊತೆಗೆ
ಬೆಳಗಿನ ನಾಷ್ಟಾ ಆಗುತ್ತೆ |
ಮಧ್ಯಾಹ್ನದ ಊಟಕ್ಕೆಲ್ಲ
ಅಮ್ಮನ ಜೊತೆಗೆ ಇರುತ್ತೆ||೫||
ರಾತ್ರಿ ಹೊತ್ತು ಟಿವಿ ಮುಂದೆ
ತಂಗಿಯ ಮಡಿಲಲ್ಲಿ ಮಲಗುತ್ತೆ|
ಅಪ್ಪ ಅಮ್ಮ ತಂಗಿಗೂ ನನಗೂ
ಆಟದ ಖುಷಿಯ ನೀಡುತ್ತೆ||೬||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 1 view
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ