Skip to main content

ಚಂದಿರ

ಚಂದಿರ
ಇಂದ prabhu
ಬರೆದಿದ್ದುJanuary 18, 2019
noಅನಿಸಿಕೆ

ಅಮ್ಮ ನನಗೆ ಚಂದಿರ ಬೇಕು
ತಂದು ಕೊಡಮ್ಮ|
ತಮ್ಮನ ಜೊತೆಗೆ ಆಡಲಿಕ್ಕೆ
ಅವನೇ ಬೇಕಮ್ಮ||೧||
ಮಿಂಚಿ ಮಿಣಕೋ ತಾರೆಗಿಂತ
ಚಂದ ಇವನಮ್ಮ|
ಗಗನದಲ್ಲಿ ಸುಮ್ಮನೆ ಒಬ್ಬನೆ
ಓಡುವನಮ್ಮ||೨||
ಹುಣ್ಣಿಮೆಯಲ್ಲಿ ದುಂಡಗಿದ್ದು
ಬೆಳದಿಂಗಳ ಸುರಿಯೋ ಸುಂದರ|
ಅಮವಾಸ್ಯೆ ರಾತ್ರಿ ಎಲ್ಲಿಗೆ ಹೋದ
ಗೊತ್ತೇನಮ್ಮ ಚಂದಿರ||೩||
ಆಡಲು ಬರುವ ಚಂದಿರಗೂ
ಹಾರ್ಲಿಕ್ಸ್ ಕಾಂಪ್ಲಾನ್ ಕೊಡಮ್ಮ|
ಮರಳಿ ಹೋಗುವಾಗ ಅವಗೆ
ಬೆಣ್ಣಿ ರೊಟ್ಟಿ ತಿನಿಸಮ್ಮ||೪||
ಹುಣ್ಣಿಮೇಲಿ ಹೋಳಿಗೆ ಸಂಡಿಗೆ ನೀಡಮ್ಮ
ನಿನ್ನ ಕೈತುತ್ತು ಸ್ವಲ್ಪ ನೋಡಲಮ್ಮ|
ಅಂದ್ರೆ ಮತ್ತೆ ದಿನವೂ ಬರುವ ಸಂಜೆ ವೇಳೆಗೆ
ಆಡಲು ನನ್ನ ತಮ್ಮನ ಜೊತೆಯಮ್ಮ||೫||
ಈ ಗುಟ್ಟು ಅವಗೆ ನೀನು
ಹೇಳಬೇಡಮ್ಮ|
ಗೊತ್ತಾದರೆ ಅವನು ಮತ್ತೆ
ಬರೋದಿಲ್ಲಮ್ಮ||೬||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.