ಪ್ರಾರ್ಥನೆ
ತಾಯಿ ಶಾರದೆ ನಮಿಸುವೆ ನಿನಗೆ
ವಿದ್ಯೆಯ ಕಲಿಸು ಬೇಗನೆ ನಮಗೆ|
ಮುದ್ದು ಮಕ್ಕಳ ಮನವಿ ಆಲಿಸು
ಶುದ್ಧಾಕ್ಷರಗಳ ನಮಗೆ ಕಲಿಸು||೧||
ಕೂಡಿಸಿ ಕಳೆದು ಬಾಗಿಸಿ ಗುಣಿಸುವ
ಲೆಖ್ಖಗಳೆಲ್ಲ ತಟ್ಟನೆ ಕಲಿಸು|
ಹಿಂದಿ ಇಂಗ್ಲೀಷ್ ವಿಜ್ಞಾನವೆಲ್ಲ
ಕನ್ನಡದಂತೆ ಅರಗಿಸಿ ಕುಡಿಸು||೨||
ಗುರುಗಳು ಹೇಳುವ ಪಾಠಗಳೆಲ್ಲ
ಮರೆಯದ ಹಾಗೆ ಮನದಲ್ಲಿರಿಸು|
ಕಷ್ಟವು ಎಷ್ಟೇ ಬಂದರೂ ನಮಗೆ
ಸತ್ಯವ ನುಡಿವ ಹಾಗೆ ಮಾಡಿಸು||೩||
ನಡೆ ನುಡಿ ಎಲ್ಲವೂ ಒಳ್ಳೆಯವಿರಲಿ
ಎಲ್ಲರಲೂ ಸದ್ಗುಣ ಬೆಳೆಸು|
ವೀಣಾಪಾಣಿಯೇ ಶಾರದೆ ನೀನು
ಒಲಿದು ನಮಗೆ ಬೇಗನೇ ಹರಸು||೪||
ವಿದ್ಯೆಯನೆಂದೂ ಯಾರೂ ಕದಿಯರು
ದುಡ್ಡನು ಕೊಟ್ಟರೂ ಖರೀದಿಸಲಾಗದು|
ಜಗದ ಎಲ್ಲಡೆ ಬದುಕುವ ಧೈರ್ಯವು
ನಿನ್ನಿಂದಲೇ ತಾನೆ ದೊರಕುವದು||೫||
ಎಂತಹ ಸ್ಪರ್ಧೆಯು ಎಲ್ಲೆ ಇರಲಿ
ನಮ್ಮ ಶಾಲೆಯ ಮಕ್ಕಳೆ ಗೆಲ್ಲಲಿ|
ನಮ್ಮಿಂದ ನಮ್ಮ ಶಾಲೆಯ ಕೀರ್ತಿಯು
ಎಲ್ಲಡೆ ಹರಡುತಲೇ ಇರಲಿ||೬||
ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 11 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ