Skip to main content

ಟಿ ವಿ

ಟಿ ವಿ
ಇಂದ prabhu
ಬರೆದಿದ್ದುJanuary 12, 2019
noಅನಿಸಿಕೆ

ಟಿ ವಿಯ ನೋಡಲು ಕುಳಿತರೆ ಅಮ್ಮಗೆ
ಜಗದ ಪರಿವೆ ಇರಲ್ಲ|
ಒಲೆಯ ಮೇಲಿನ ಅನ್ನ ಸೀದರೂ
ಲಕ್ಷವೇ ಇರೋಲ್ಲ||೧||
ಹಾಲು ಉಕ್ಕಲಿ ಬೆಕ್ಕು ಕುಡಿಯಲಿ
ಗಮನವೇ ಅತ್ತ ಕೊಡೋಲ್ಲ|
ಸಾರು ಪಲ್ಯಕೆ ಉಪ್ಪು ಹೆಚ್ಚಿ
ಅಪ್ಪನ ಬೈಗುಳ ತಪ್ಪೊಲ್ಲ||೨||
ಸುದ್ದಿಯ ನೋಡಲು ಅಪ್ಪಗೆ ಸಿಗದೆ
ಸಿಟ್ಟಲಿ ಹೋಗುವ ಹೊರಗೆ|
ಪೋಗೋ ಕಾರ್ಟೂನ ನೋಡಲಾಗದೆ
ತಮ್ಮನ ಸೆಡವು ಒಳಗೊಳಗೆ||೩||
ಮಜಾಟಾಕೀಜ್ ಬಿಗ್ ಬಾಸ್ ಅಂತ
ಅಕ್ಕನು ಕಾಯೋದು ರೂಂ ಒಳಗೆ|
ಎಲ್ಲರ ನಡುವೆ ಸರಿಗಮ ಸಿಗದೆ
ಹುಸಿ ಕೋಪ ನನ್ನೊಳಗೆ||೪||
ಚಾನೆಲ್ ಬದಲಿಸಿ ನೋಡುವ ಅಮ್ಮಗೆ
ಬ್ಯೂಟಿ ಟಿಪ್ಸ್ ಅಡುಗೆ ರುಚಿ ಇಷ್ಟ|
ಧಾರಾವಾಹಿ ನೋಡುತ ಕುಳಿತರೆ
ಮುಖವ ನೋಡೋದೆ ಬಲು ಕಷ್ಟ||೫||
ಸಿನೇಮಾ ಕ್ರಿಕೆಟ್ ಕಬಡ್ಡಿಯಾಗಲಿ
ಡಿಸ್ಕವರಿಗೂ ಸ್ಥಾನವೇ ಇಲ್ಲ|
ನೋಡಲು ಹೋಗುವ ನಮಗಾರಿಗೂ
ರಿಮೋಟೇ ಸಿಗೋಲ್ಲ||೬||
ಟಿವಿಯ ಕಾರಣ ಮನೆಯೊಳಗೆ
ಆಗೀಗ ಸಣ್ಣ ಕುರುಕ್ಷೇತ್ರ|
ಕುಳಿತೆ ಕುರುಕುಲು ತಿನ್ನುವ ಅಮ್ಮಗೆ
ಹೊರೆಯಾಗುತಿದೆ ಮೈಯ ಗಾತ್ರ!||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.