Skip to main content

ರೊಟ್ಟಿ

ರೊಟ್ಟಿ
ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ಅಮ್ಮ ನನಗೂ ಹಿಟ್ಟನು ಕೊಡು
ಜೋಳದ ರೊಟ್ಟಿಯ ಮಾಡುವೆನು|
ಕೊಣಮಗಿಯಲ್ಲಿ ಹಿಟ್ಟನು ಹಾಕಿ
ಬಿಸಿ ನೀರನು ಸುರುವುವೆನು||೧||
ಗಂಟಾಗದ ರೀತಿ ಮೆಲ್ಲಗೆ ಕಲಿಸಿ
ಉಳ್ಳಿಯ ಮಾಡುವೆನು|
ಪಟ ಪಟ ಬಡೆದು ದುಂಡಗೆ ಮಾಡಿ
ಹಂಚಲಿ ಹಾಕುವೆನು||೨||
ರೊಟ್ಟಿಯು ಬೆಂದು ಹೊಟ್ಟೆಯು ಉಬ್ಬಲು
ಪುಟ್ಟಿಗೆ ಹಾಕುವೆನು|
ಅಪ್ಪಗೆ ನಿನಗೂ ತಮ್ಮಗೆ ಒಂದು
ರೊಟ್ಟಿಯ ಬಡಿಯುವೆನು||೩||
ಮೊಸರು ಪಲ್ಯ ಬೇಡ ಅಂದ್ರೆ
ಬೆಣ್ಣಿ ಚಟ್ನಿಯ ಹಚ್ಚುವೆನು|
ಬಾಯಲಿ ಇಟ್ಟರೆ ಕರಗುವ ಹಾಗೆ
ಮೆತ್ತಗೆ ಮಾಡುವೆನು||೪||
ಕುರು ಕುರು ರೊಟ್ಟಿ ಬೇಕೆಂದರೆ
ಬೆಂಕಿಯ ಝಳಕಿಡುವೆ|
ನಿತ್ಯವೂ ನಿನ್ನಯ ಅಡುಗೆಯ ನೋಡಿ
ನಾನೇ ಕಲಿತಿರುವೆ||೫||
ಅಮ್ಮ ನೀನೇ ನನ್ನಯ ಗುರುವು
ಕಲಿಸುವೆ ಎಲ್ಲವೂ ಮನೆಯಲ್ಲಿ|
ನಿನ್ನ ಹಾಗೆ ಒಳ್ಳೆಯ ಅಮ್ಮ
ಆಗುವೆ ಎಲ್ಲರ ಬಾಯಲ್ಲಿ||೬||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.