Skip to main content

ನೆಪ

ನೆಪ
ಇಂದ prabhu
ಬರೆದಿದ್ದುJanuary 3, 2019
noಅನಿಸಿಕೆ

ಅಮ್ಮಾ ತುಂಬಾ ಚಳಿ ಇದೆ
ಉಣ್ಣಿ ಸ್ವೇಟರ್ ಹಾಕು|
ಕಾಲಿಗೆ ಚೀಲ ಕೈಗೆ ಗೌಸು
ತಲೆಗೆ ಟೊಪ್ಪಿಗೆ ಬೇಕು||೧||
ಶಾಲೆಗೆ ಹೋಗು ಅಂದ್ರೆ ಹೇಗೆ
ಇಂಥ ಕೊರೆವ ಚಳೀಲಿ|
ಬೆಚ್ಚಗೆ ಒಲೆಯ ಮುಂದೆ
ಕೂಡ್ರುವೆನು ಮನೇಲಿ||೨||
ಚಳಿಗೆ ಹೆಚ್ಚು ಕಮ್ಮಿ ಆದ್ರೆ
ನಿನಗೆ ಕಷ್ಟ ಕಣಮ್ಮ|
ನನ್ನ ಪಾಲನೆ ಮಾಡೋದು
ನೀನೇ ಅಲ್ವ ಅಮ್ಮ||೩||
ಚಳಿಗಾಲ ಕಳೆದ ಮೇಲೆ
ಶಾಲೆಗೆ ಹೋಗುವೇನು|
ಒಂದೂ ದಿನವೂ ತಪ್ಪಿಸೋದಿಲ್ಲ
ನೋಡು ನೀನು||೪||
ಚಳಿಗೆ ಹೆದರಿ ಶಾರಿ ಪಾರಿ
ಶಾಲೆಗೆ ಬರೋದೇ ಇಲ್ಲ|
ಲೇಟಾಗೋದ್ರೆ ಗುರುಗಳು ನಿಲ್ಲಿಸಿ
ಮಗ್ಗಿ ಕೇಳ್ತಾರಲ್ಲ||೫||
ಸಾಕು ಮಾಡು ನಿನ್ನ ನೆಪ
ಶಾಲೆಗೆ ಹೋಗು ಮಗಳೆ|
ನನ್ನೊಂದಿಗೆ ಸಾಕು ಇದು
ಅನಕ್ಷರತೆಯ ರಗಳೆ||೬||
ಹೆಣ್ಣು ಶಾಲೆ ಕಲಿತರೆ ಇಂದು
ಜೀವನವೆಲ್ಲ ಜ್ವಾಪಾನ|
ನಾಳಿನ ಸುಂದರ ಕನಸಿಗೆ ಇದು
ಓದೇ ಸುಖದ ಸೋಪಾನ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.