Skip to main content

ದಿನದರ್ಶಿಕೆ ಬಿಡುಗಡೆ

ದಿನದರ್ಶಿಕೆ ಬಿಡುಗಡೆ
ಇಂದ prabhu
ಬರೆದಿದ್ದುJanuary 2, 2019
noಅನಿಸಿಕೆ

ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜನನಾಡಿ ಪಾಕ್ಷಿಕದ ೨೦೧೯ರ ದಿನದರ್ಶಿಕೆಯನ್ನು ಶ್ರೀವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿಗಳಾದ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಬುಧವಾರ ಮಧ್ಯಾಹ್ನ ಬಿಡುಗಡೆ ಮಾಡಿದರು.
ಆಧುನಿಕ ಕಾಲದ ಈ ದಿನಮಾನಗಳಲ್ಲಿ ಎಲ್ಲಾ ವರ್ಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಜನಪರ ಕಾಳಜಿವುಳ್ಳ ಜವಾಬ್ದಾರಿಯನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ನಿರ್ವಹಿಸಬೇಕಾಗಿದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು. ಜನನಾಡಿ ಪತ್ರಿಕೆಯ ಸಂಪಾದಕ ಡಾ.ಗಣೇಶ್ ಸುಲ್ತಾನಪುರ ಮಾತನಾಡಿ ತ್ರಿಭಾಷಾ ಪಂಡಿತರು, ನಡೆದಾಡುವ ದೇವರಾಗಿದ್ದ ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಛಾಯಾಚಿತ್ರ ಹೊಂದಿರುವ ಬಹುವರ್ಣದ ದಿನದರ್ಶಿಕೆ ಯನ್ನು ಹೊರತಂದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಶ್ರೀಗಳು ಇಂದು ದಿನದರ್ಶಿಕೆ ಬಿಡುಗಡೆ ಮಾಡುತ್ತಿರುವದು ಜೊತೆಗೆ ಜನನಾಡಿ ಪತ್ರಿಕೆಯ ಪ್ರಸಕ್ತ ಸಂಚಿಕೆ ಬಿಡುಗಡೆಗೊಳಿಸಿದ್ದು ಸಂತೋಷ ತಂದಿದೆ. ಎಲ್ಲರೂ ಓದಿ ಪ್ರೋತ್ಸಾಹಿಸಬೇಕು ಮತ್ತು ಪತ್ರಿಕೆಗೆ ಲೇಖನ, ಕವನಗಳನ್ನು ಕಳಿಸುವಂತೆ ಮನವಿ ಮಾಡಿದರು. ಈ ಸಂದರ್ಬದಲ್ಲಿ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಕಾಂತ ಪಾಠಕ್,ಪತ್ರಕರ್ತರಾದ ಆನಂದ ಸಾಲಿಗ್ರಾಮ,ಡಾ.ಪ್ರಭು ಗಂಜಿಹಾಳ,ಪ್ರೊ.ರಾಜೀವ ಹಿರೇಮಠ, ಪ್ರೊ.ಗಡ್ಡದ್ದೇವರಮಠ,ಪುಟ್ಟರಾಜ ಹಿರೇಮಠ,ಬಿ.ಎಲ್.ಹಿರೇಮಠ,ವೀರುಪಾಕ್ಷಿ ಪಟ್ಟದಕಲ್, ಮುಂತಾದವರು ಸೇರಿದಂತೆ ಸಂಗೀತ ಮಹಾವಿದ್ಯಾಲಯ ಹಾಗೂ ಕಲಾ ಮಹಾವಿದ್ಯಾಲಯದ ಬೋಧಕ,ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಪ್ರೊ.ವಿ.ಎಂ.ಗುರುಮಠ ಸ್ವಾಗತಿಸಿ ನಿರೂಪಿಸಿದರು.ಕೊನೆಯಲ್ಲಿ ಡಾ.ರಾಜಶೇಖರ ದಾನರಡ್ಡಿ ವಂದಿಸಿದರು.
-ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.