Skip to main content

ನಮ್ಮ ಶಾಲೆ

ನಮ್ಮ ಶಾಲೆ
ಇಂದ prabhu
ಬರೆದಿದ್ದುJanuary 2, 2019
noಅನಿಸಿಕೆ

ನಮ್ಮ ಊರ ನಮ್ಮ ಶಾಲೆ
ನಮ್ಮದೆಂಬ ಹೆಮ್ಮೆ|
ನೋಡ ಬನ್ನಿ ಊರ ಹೊರಗೆ
ವಿದ್ಯಾ ಮಂದರನೊಮ್ಮೆ||೧||
ಒಂದರಿಂದ ಎಂಟನೆ ತರಗತಿ
ನಡೆವವಿಲ್ಲಿ ಪ್ರತಿದಿನ|
ಜ್ಞಾನ ವಿಜ್ಞಾನ ಜೊತೆಗೆ
ನಿತ್ಯ ಪಾಠ ಹೊಸತನ||೨||
ಬೆಳಗಿನಿಂದ ಉತ್ಸಾಹದಿ
ವಿಷಯಗಳ ಪಾಠ|
ಶಾಲೆ ಬಿಟ್ಟ ನಂತರ
ಮೈದಾನದಿ ಆಟ||೩||
ಗಂಡು ಹೆಣ್ಣು ಭೇದವಿಲ್ಲ
ಸಹಶಿಕ್ಷಣವೇ ಪ್ರತಿಕ್ಷಣ|
ಸಮವಸ್ತ್ರ ಸಹಭೋಜನ
ಸಮಾನತೆಯೇ ಅನುದಿನ||೪||
ನಮ್ಮ ಪ್ರತಿಭೆಗುಂಟು ಇಲ್ಲಿ
ಹಲವು ವೇದಿಕೆ|
ನಲಿಯುತ್ತ ಕಲಿಯುವದೇ
ನಮಗೆಲ್ಲ ನಂಬಿಕೆ||೫||
ಹಸಿಯ ಅರಲಂತಿರುವ ನಮಗೆ
ತಿದ್ದಿ ರೂಪ ನೀಡುವ ಗುರು|
ನಡೆ ನುಡಿ ವಿನಯ ಕಲಿಸೋ
ಬದುಕ ದಾರಿ ದೀಪ ಅವರು||೬||
ಇಲ್ಲಿ ಕಲಿತವರೆಷ್ಟೋ
ಸಾಧಕರಿಂದು ಜಗದಲಿ|
ಅವರೀ ಶಾಲೆ ಕುಡಿಗಳೇ
ಎಂಬ ಹೆಮ್ಮೆ ನಮಗಿಲ್ಲಿ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.