ಆಟ
ಅಪ್ಪ ಅಪ್ಪ ನನ್ನ ನೀನು
ಕುಂಕಿ ಮರಿ ಮಾಡು|
ಬೆನ್ನ ಮೇಲೆ ಹತ್ತಿಸಿಕೊಂಡು
ವೇಗದಲ್ಲಿ ಓಡು||೧||
ಹೆಗಲ ಮೇಲೆ ಕೂರಿಸಿಕೊಂಡು
ಕೋತಿಮರಿ ಮಾಡಿಸು|
ಕಾಲ ಮೇಲೆ ಕೂಡಿಸಿಕೊಂಡು
ಆನೆ ಆಟ ಆಡಿಸು||೨||
ಹೊಟ್ಟೆ ಹಿಡಿದು ಮೇಲೆ ತೂರಿ
ಅವುಕ್ಕಲೇ ಕಳ್ಳ ಎನಿಸು|
ರಟ್ಟೆ ಹಿಡಿದು ಗಿರ ಗಿರ ತಿರುಗಿ
ಗಿರಿಗಿಟ್ಟಿ ಮಾಡಿಸು||೩||
ಕೈಯಲಿ ಹತ್ತಿ ಕಟಗಿ ಬತ್ತಿಕಟಗಿ
ಬೆರಳ ಮೇಲೆ ಆಡಿಸು|
ಅಪ್ಪಗೊಂದ ತುತ್ತು ಅಮ್ಮಗೊಂದ ತುತ್ತಂತ
ಕಚಗುಳಿ ಇಟ್ಟು ನಗಿಸು||೪||
ಅಂಬೆಗಾಲಿನಲ್ಲಿ ನಡೆದು
ಅಂಬಾ ಆಟ ಆಡೋಣ|
ರಜಾ ದಿನವಾದರೂ ನಾವು
ಎಲ್ಲಾರೂ ಕೂಡಿ ಕಳೆಯೋಣ||೫||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 7 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ