ಸನ್ಗೊಂದು ರಿಕ್ವೇಸ್ಟ್
ಸಂಡೆ ಅಂತ ಗೊತ್ತಿದ್ರೂನೂ
ಹಿಂಗೇ ಬಂದ ಬಿಡೋದಾ|
ಇರೋ ಒಂದ್ ದಿನಾನಾದ್ರೂ
ಬಿಡದೆ ಕಾಟ ಕೊಡೋದಾ?||೧||
ಶಾಲೆಗೆ ಹೋಗೋದಿದೆಯಂತ
ದಿನವೂ ಬೇಗ ಏಳಬೇಕು|
ಅಪ್ಪನ ಗಾಡಿ ಒರೆಸಿಕೊಟ್ಟು
ಮನೆಯ ಕಸವ ಹೊಡೆಯಬೇಕು||೨||
ಅಮ್ಮ ತಿಂಡಿ ಮಾಡೋದ್ರಲ್ಲಿ
ಶಾಲೆಗೆ ತಯ್ಯಾರ್ ಆಗ್ಬೇಕು|
ಬ್ಯಾಗು ಸೈಕಲ್ಲಿಗೆ ಹಾಕಿ
ಬೆಲ್ ಹೊಡೆಯೋದ್ರಲ್ಲೆ ಓಡ್ಬೇಕು||೩||
ಪಾಠ ಆಟ ಊಟದ ನಡುವೆ
ಮಲಗೋಕೆ ವೇಳೆ ಎಲ್ಲಿದೆ?|
ಮೇಷ್ಟ್ರು ಕೊಡೋ ಹೋಂವರ್ಕೆಲ್ಲ
ಮುಗಿಸೆ ಮಲ್ಕೋಬೇಕಲ್ವೆ?||೪||
ತಂಗಿಯಂತೂ ಕೇಳೋರಿಲ್ಲ
ಅವಳು ಬಾಳ್ ಸಣ್ಣೋಳು|
ಅಮ್ಮ ಹೇಳೋ ಕೆಲ್ಸ ಎಲ್ಲ
ನೀನೇ ಮಾಡು ಅನ್ನೋಳು||೫||
ವಾರಪೂರ್ತಿ ಬಿಡದೆ ದುಡಿವೆ
ನಿದ್ರೆಗೆಲ್ಲಿ ವೇಳೇ ಇಲ್ಲ |
ದುಡಿದು ದಣಿದ ಮನಕೆ
ರೆಸ್ಟಂತೂ ಇಲ್ಲವೇ ಇಲ್ಲ||೬||
ಹೊರಗೆ ಕೊರೆವ ಚಳಿಯುಂಟು
ರಗ್ಗೊಳಗೆಂತ ಸುಖವುಂಟು|
ಅಮ್ಮಗೆ ಹೇಳಿ ರಗ್ಗನು ಕೊಡಿಸುವೆ
ಬೆಚ್ಚಗೆ ಮಲಗು ಖುಸಿಯುಂಟು||೭||
ಅದ್ಕೇ ನಿಂಗೆ ರಿಕ್ವೇಸ್ಟು
ಸಂಡೇನಾದ್ರೂ ಬಾ ಲೇಟು|
ಪ್ಲೀಸ್ ಕೇಳೋ ರವಿಮಾಮ
ಕೊಡುವೆ ಕ್ಯಾಡಬರಿ ಚಾಕಲೇಟು||೮||
ಹೊಸ ವರ್ಷಕೆ ಕ್ಯಾಲೆಂಡರ ಕೊಡುವೆ
ನಿತ್ಯ ನೋಡು ಲಕ್ಷಕೊಟ್ಟು |
ರಜೆಗಳ ದಿನಗಳಲೆಲ್ಲ
ಬಾರೋ ಲೇಟಾಗಿ ಒಂದಿಷ್ಟು||೯|\
....ಓ ಸನ್ನೆ..ನಿನಗೆ ..ಇದು..ನನ್ನ ಹಂಬಲ್ ರಿಕ್ವೇಸ್ಟು...
ರಚನೆ:ಡಾ.ಪ್ರಭು ಅ.ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 22 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ