ಪರಿಸರ
ಬನ್ನಿರಿ ಗೆಳೆಯರೆ ಸಸಿಯನ್ನು ನೆಟ್ಟು
ವನವನು ನಾವು ಬೆಳೆಸೋಣ |
ನಾಡಿನ ತುಂಬ ಗಿಡಮರ ಬೆಳೆಸಿ
ಪರಿಸರವನ್ನು ಉಳಿಸೋಣ||೧||
ಕಲ್ಲ ಮಲ್ಲ ಗುದ್ದಲಿ ತಂದರು
ತಗ್ಗನು ತೆಗೆದರು ಖುಷಿಯಿಂದ
ಮಾವು ಬೇವು ಹೊಂಗೆ ಹುಣಸೆ
ಸಸಿಗಳ ನೆಟ್ಟರು ಒಲವಿಂದ ||೨||
ಶಾಲೆ ರಸ್ತೆ ಬದಿಗಳಲೆಲ್ಲ
ಗುರುಗಳ ಅಣತಿಯ ನುಡಿಯಂತೆ|
ಸೀತಾ ಗೀತಾ ಮೀನಾರೆಲ್ಲ
ಬೇಲಿಯ ಕಟ್ಟಿ ಸರದಿಯಂತೆ ||೩||
ನಿತ್ಯವೂ ನೀರನು ಹಾಕುತಲೆ
ಬೆಳೆಸಿದರೆಲ್ಲರೂ ಪ್ರೀತಿಯಲಿ |
ಗುರು ಹಿರಿಯರ ಮೆಚ್ಚುಗೆಯು
ಹುರುಪನು ತಂದಿತು ಮಕ್ಕಳಲಿ||೪||
ನೀರು ಗಾಳಿ ಕಲುಸಿತದಿಂದ
ಜೀವ ಸಂಕುಲ ಉಳಿಸುವಾ
ನಿತ್ಯವೂ ಮನುಜರ ವಿಲಾಸದಿಂದ
ಓಜೋನನ್ನು ರಕ್ಷಿಸುವಾ||೫||
ಮರಗಳ ಬೆಳೆಸಿ ಬರವನು ಅಳಿಸಿ
ಸಸ್ಯವೇ ನಾಡಿನ ಸಂಪತ್ತು|
ಮಳೆಯನು ಇಳೆಗೆ ತರುವದು ಇದುವೆ
ಹಸುರಿನ ಹೊನ್ನು ಯಾವತ್ತೂ||೬||
ನಮ್ಮ ಶಾಲೆ ಮಕ್ಕಳದು
ಮಾದರಿ ಆಯಿತು ನಾಡಿನಲಿ |
ಇವರನು ನೋಡಿ ಕಲಿಯಿರಿ ಎಂದರು
ಮಂತ್ರಿಗಳೇ ಪ್ರಶಸ್ತಿ ನೀಡುತಲಿ||೭||
ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 3 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ