Skip to main content

ಸೈಕಲ್ ಮಕ್ಕಳ ಕವಿತೆ

ಸೈಕಲ್ ಮಕ್ಕಳ ಕವಿತೆ
ಇಂದ prabhu
ಬರೆದಿದ್ದುDecember 28, 2018
noಅನಿಸಿಕೆ

ಶಾಲೆಗೆ ನಡೆದು ಹೋಗಲು ಆಗ್ದು
ನನಗೂ ಸೈಕಲ್ ಕೊಡಿಸಮ್ಮ |
ಅಕ್ಕನ ಜೊತೆಗೆ ಸರ ಸರ ಹೋಗಿ
ಬರ ಬರ ಬರುವೆ ನಾನಮ್ಮ ||೧||
ರಸ್ತೆಯ ಮಧ್ಯೆ ದನ ಕರು ನಾಯಿ
ಬಂದರೆ ಪಕ್ಕಕೆ ನಿಲ್ಲುವೆನು|
ಮೋಟರ್ ವಾಹನ ಎದುರಿಗೆ ಬಂದರೆ
ಮೆಲ್ಲಗೆ ಸೈಕಲ್ ನಡೆಸುವೆನು||೨||
ಮಕ್ಕಳು ಮಂದಿ ಬಹಳ ಇದ್ದರೆ
ಬೆಲ್ಲನು ಜೋರಲಿ ಹೊಡೆಯುವೆನು|
ಒಂದೇ ವೇಗದಿ ಪೆಡಲನು ತುಳಿದರೆ
ದೇಹಕೆ ವ್ಯಾಯಾಮ ಅಲ್ವೇನು?||೩||
ಮೋಟರ್ ಗಾಡಿಯ ಎಣ್ಣೆಯೂ ಬೇಡ
ದುಡ್ಡೂ ಉಳಿಯುತ್ತೆ |
ಹೊಗೆಯ ಜೊತೆಗೆ ಕರ್ಕಶವಿರದೆ
ಪರಿಸರ ಹಾನಿಯೂ ತಪ್ಪುತ್ತೆ||೪||
ಅಪ್ಪಗೆ ಹೇಳು ನಿನ್ನ ಮಾತಿಗೆ
ಬೆಲೆಯೂ ಇರುತ್ತೆ |
ನಾನು ಹಠ ಹಿಡಿದರೆ ಸಾಕು
ಹೊಡೆತ ಜೋರಲಿ ಬೀಳುತ್ತೆ||೫||
ಸೈಕಲ್ ನೆವವು ಏತಕೆ ಬೇಕು
ಓದಿನತ್ತ ಲಕ್ಷ್ಯ ಹಾಕು |
ಅಕ್ಕನ ಹಾಗೆ ಹೈಸ್ಕೂಲ್ಗೋದ್ರೆ
ಸೈಕಲ್ ಸರ್ಕಾರ ಕೊಟ್ಟೇ ಕೊಡುತ್ತೆ||‍೬||
ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.