ಗುಬ್ಬಚ್ಚಿ ಮಕ್ಕಳ ಕವನ
ಗುಬ್ಬಿ ಗುಬ್ಬಿ ಗುಬ್ಬಚ್ಚಿ
ಚಿಂವ್ ಚಿಂವ್ ಅಂತ ಒದರುತ್ತಿ |
ಪುಟ್ಟಗೂಡು ಕಟ್ಟಿಕೊಂಡು
ಚೊಕ್ಕದಾಗಿ ಇರುತ್ತಿ ||೧||
ಅತ್ತ ಇತ್ತ ತಲೆಯ ತಿರುವಿ
ಸುತ್ತ ಮುತ್ತ ನೋಡುತ್ತಿ |
ಕಾಳು ಕಡಿಯ ಹುಡುಕುತ್ತ
ಚಿಂವ್ ಚಿಂವ್ ಅಲೆಯುತ್ತಿ ||೨||
ನಾಳೆ ನಾಡಿದ್ದ್ ಬೇಕೂಂತ
ಎಷ್ಟು ಆಶೆ ನಿನಗಿಲ್ಲ|
ಕಾಳ ನಿಟ್ಟು ಒಟ್ಟಲಿಕ್ಕೆ
ಗೂಡಲಿ ಜಾಗ ಇಲ್ಲವೇ ಇಲ್ಲ ||೩||
ಗೂಡಿನ ಮೇಲೆ ಗೂಡನು ಕಟ್ಟಿ
ಮೆರೆಯೋ ಆಸೆ ನಿನಗೆ ಇಲ್ಲ |
ಸೈಕಲ್ ಮೋಟರ್ ಏತಕೆ ಬೇಕು
ಹಾರಲು ರೆಕ್ಕೆ ಇವೆಯಲ್ಲ ||೪||
ಓದಬೇಕು ಹಗಲೂ ಇರುಳು
ಪರೀಕ್ಷೆ ಬರೆಯೋ ಭಯವಿಲ್ಲ |
ಅಪ್ಪನಂತ ನೌಕರಿ ಬೇಕು
ಸಂಬಳ ತರೋ ಚಿಂತೆ ಇಲ್ಲ||೫||
ರಜೆಯ ಮಜವು ಕಳೆದರೆ ಮತ್ತೆ
ಶಾಲೆಗೆ ಹೋಗೋ ಚಿಂತೆ ಇಲ್ಲ |
ನಿನ್ನಂತ ಭಾಗ್ಯಶಾಲಿ
ಬೇರೆ ಯಾರೂ ಇಲ್ಲವೇ ಇಲ್ಲ ||೬||
-ರಚನೆ:ಡಾ.ಪ್ರಭು.ಅ.ಗಂಜಿಹಾಳ್
ಮೊ:೯೪೪೮೭೭೫೩೪೬
ಸಾಲುಗಳು
- 244 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ