ತಮ್ಮ ಮಕ್ಕಳ ಕವಿತೆ
ಅಮ್ಮ ಯಾಕೋ ತಮ್ಮ ನೋಡು
ಅಳುತಲಿರುವನು |
ಚಾಕಲೇಟು ಬಿಸ್ಕೀಟ್ ಬೇಕಾ
ಕೇಳಿ ಬಿಡಲೇನು? ||೧||
ಎತ್ತಿಕೊಂಡು ಸುತ್ತಿ ಸುಳಿದೆ
ತಕ್ಕಥೈ ಎಂದು ಕುಣಿದೆ |
ನಾಯಿ ಬೆಕ್ಕು ಆಡು ಹುಲಿಯು
ಎಲ್ಲ ಪ್ರಾಣಿ ಧ್ವನಿಯ ಗೈದೆ ||೨||
ಬುಗುರಿ ತಿರುಗಿಸಿ ಗಿರ ಗಿರ
ಕಾರು-ರೈಲು ಎಲ್ಲಾ ಬಿಟ್ಟೆ |
ಗೊಂಬೆ ಹಿಡಿದರೂ ಎದುರಲಿ
ಸುಮ್ಮನಾಗದಕ್ಕೆರಡು ಕೊಟ್ಟೆ ||೩||
ಎಂಥ ತಮ್ಮನ ಹಡೆದೆಯಮ್ಮ
ಬರೀ ಅಳುಬುರುಕ ಮುಂಜಿ |
ಹಗಲೂ ಇರುಳು ಅಳೊದೊಂದೇ
ನಿನ್ನ ಭಯವೇ ಇಲ್ಲ ಅಂಜಿ ||೪ ||
ಬಹುಶ: ಹೊಟ್ಟೆ ಹಸಿದಿರಬೇಕು
ಇಷ್ಟು ಅಳುವ ಸುಮ್ಮಗೆ |
ನನ್ನ ಪಾಲಿನ ಬಿಸ್ಕೀಟ್ ಚಾಕ್ಲೇಟ್
ಕೊಟ್ಟು ಬಿಡಮ್ಮ ತಮ್ಮಗೆ ||%||
ಅವಗೆ ಕೊಟ್ಟ್ ಬಿಸ್ಕೀಟ್ ಚಾಕ್ಲೇಟ್
ಮಣ್ಣಾಯ್ತೆಂದು ತಿಂದೆ ನಾನು |
ಅಷ್ಟಕ್ಕಿಷ್ಟು ರಂಪ ಹಿಡಿದ
ಮೊಂಡು ತಮ್ಮ ನೋಡು ||೬||
* ರಚನೆ:ಡಾ.ಪ್ರಭು ಅ ಗಂಜಿಹಾಳ್
ಮೊ:೯೪೪೮೭೭೫೩೪೬
ಸಾಲುಗಳು
- 11 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ