Skip to main content

ಕಂದ ಪದ್ಯ

ಕಂದ ಪದ್ಯ
ಇಂದ prabhu
ಬರೆದಿದ್ದುDecember 22, 2018
noಅನಿಸಿಕೆ

ಅಮ್ಮ ಅಮ್ಮ ನೋಡಮ್ಮ
ಹ್ಯಾಗ್ಯಾಗೆ ಮಾಡ್ತಾಳೆ |
ಮೂಗನು ಮುರಿದು ಬಾಯನು ಹೊರಳಿಸಿ
ಪ್ಯಾ ಪ್ಯಾ ಮಾಡ್ತಾಳೆ ||೧||
ಕಣ್ಣನು ಹಿಗ್ಗಿಸಿ ತುಟಿಗಳ ಕಚ್ಚಿ
ಮ್ಯಾಂವ್ ಮ್ಯಾಂವ್ ಅಂತಾಳೆ |
ಕಿವಿಯನು ಎಳೆದು ಕೆನ್ನೆಯ ಉಬ್ಬಿಸಿ
ಬೌ ಬೌ ಅಂತಾಳೆ ||೨||
ಎರಡೂ ಜಡೆಯ ಕೂದಲು ಬಿಚ್ಚಿ
ಮುಖವನು ಮುಚ್ತಾಳೆ |
ನಾನು ಭವ್ವ ತಿನ್ನುವೆ ನಿನ್ನ
ಅಂತ ಕಿರುಚ್ತಾಳೆ ||೩||
ಪೌಡರ್ ಲಿಪ್ ಸ್ಟಿಕ್ ಎಲ್ಲ ನ್ಂದೇ
ಅವಳೂ ಬಳಸ್ತಾಳೆ |
ನಂದೇ ಡ್ರೆಸ್ ಯಾವಗ್ಲೂ ಹಾಕಿ
ಒಳಗೆ ಇಅರ್ತಾಳೆ ||೪||
ಇಂಥ ಹೊಟ್ಟೆ ಕಿಚ್ಚಿನ ತಂಗಿ
ಇದ್ದರೂ ಸ್ವಂತ |
ನಂಗೇಕೆ ಸುಳ್ಳು ಹೇಳಿದೆ ಅಮ್ಮ
ನೀನೋಬ್ಳೆ ಮಗಳೂಂತ ||೫||
ಬಾಯ್ ಬಡುಕಿ ಮೋರೆ ಸಿಡುಕಿ
ಆದ್ರೂ ಪರ್ವಾಗಿಲ್ಲ |
ನನ್ನ ತಂಗಿ ಅವಳೂ ಅಂತ
ಬಾಳ್ ಖುಷಿಯಾಯ್ತಲ್ಲ ||೬||
ಏ ಪೆದ್ದು ಈ ಕಡೆ ಬಾರೆ
ಕನ್ನಡಿ ನೋಡೋದ್ ಸಾಕು |
ಅದ್ರ ಮುಂದೆ ಆಡೋ ಆಟ
ಕಂಡಿರುವೆ ಸಾಕು ||೭||
-ರಚನೆ: ಡಾ.ಪ್ರಭು ಅ.ಗಂಜಿಹಾಳ್
ಮೊ:೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.