Skip to main content

ರವಿಕಿರಣ ಚಲನ ಚಿತ್ರದ ಬಿಡುಗಡೆ ಕುರಿತು ಮಾಧ್ಯಮಗೋಷ್ಠಿ

ರವಿಕಿರಣ ಚಲನ ಚಿತ್ರದ ಬಿಡುಗಡೆ ಕುರಿತು ಮಾಧ್ಯಮಗೋಷ್ಠಿ
ಇಂದ prabhu
ಬರೆದಿದ್ದುDecember 13, 2018
noಅನಿಸಿಕೆ

ಹುಬ್ಬಳ್ಳಿಯ ಮೈತ್ರಾಫಿಲಮ್ಸ್ ವತಿಯಿಂದ ಇದೆ ೧೪-೧೨-೨೦೧೮ ರಂದು ಹುಬ್ಬಳ್ಳಿಯ ರೂಪಂ ಮತ್ತು ಗದಗ ನಗರದ ಕೃಷ್ಣಾ ಥೇಟರಗಳಲ್ಲಿ ಬಿಡುಗಡೆ ಆಗುತ್ತಿರುವ ರವಿಕಿರಣ ಮಕ್ಕಳ ಚಲನಚಿತ್ರದ ಕುರಿತು ಮಾಧ್ಯಮಗೋಷ್ಠಿ ಬುಧವಾರ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ಜರುಗಿತು.
ಈ ಚಿತ್ರದಲ್ಲಿ ಸಂಪೂರ್ಣ ಉತ್ತರ ಕರ್ನಾಟಕದಲ್ಲೆ ಚಿತ್ರಿಸಲಾಗಿದೆ. ಉತ್ತರ ಕರ್ನಾಟಕದ ಕಲಾವಿದರೇ ಅಭಿನಯಿಸಿದ್ದಾರೆ.ಈ ಚಿತ್ರ ಆರು ಚಿತ್ರಮಂದಿರಗಳಲ್ಲಿ ಮೊದಲ ಹಂತದಲ್ಲಿ ಬಿಡುಗಡೆ ಮಾಡುವ ಆಲೋಚನೆ ಇತ್ತು ಆದರೆ ಕಾರಣಾಂತರಗಳಿಂದ ಕೇವಲ ಎರಡು ಚಿತ್ರಮಂದಿರಗಳಲ್ಲಿ ಸಧ್ಯ ಬಿಡುಗಡೆ ಆಗುತ್ತಿದೆ. ಮುಂದೆ ಉಳಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ಪ್ರತಿವರ್ಷ ಒಂದು ಚಿತ್ರನಿರ್ಮಾಣ ಮಾಡುವ ಗುರಿ ಹೊಂದಿದ್ದು , ಸಧ್ಯದಲ್ಲೆ ಮಕ್ಕಳ ಸಾಹಸ ಚಿತ್ರ ನಿರ್ಮಾಣಕ್ಕೆ ಸಿದ್ದತೆ ಮಾಡಲಾಗುತ್ತಿದೆ ಎಂದು ನಿರ್ಮಾಪಕ ಹಾಗೂ ನಟ ರೇಣುಕುಮಾರ ಸಂಸ್ಠಾನಮಠ ಹೇಳಿದರು.ನಿರ್ದೇಶಕ ಗುರುರಾಜ ಕಾಟೆ ಚಿತ್ರದ ಕುರಿತು ಮಾತನಾಡಿದರು. ಚಿತ್ರದಲ್ಲಿ ನೇತ್ರದಾನದ ಕುರಿತು ಸಂದೇಶವಿದ್ದು ಡಾ.ಎಂ.ಎಂ.ಜೋಶಿ ಹಾಗೂ ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಶ್ರೀ ಕಲ್ಲಯ್ಯಜ್ಜನವರ ಸಂದೇಶ ಕೂಡ ಚಿತ್ರದಲ್ಲಿದ್ದು ನಕಲಿವೈದ್ಯರ ಬಗೆಗೆ ಎಚ್ಚರಿಕೆಯ ಸಂದೇಶ ಕೂಡ ಇದರಲ್ಲಿದೆ. ಕಲಾವಿದರಾದ ಡಾ.ಗೋವಿಂದ್ ಮಣ್ಣೂರ್ ಅಂಧ ಶಿಕ್ಷಕನ ಪಾತ್ರ ನಿರ್ವಹಿಸಿದ್ದು, ನಿರ್ಮಾಪಕ ರೇಣುಕುಮಾರ್ ಆಸ್ಪತ್ರೆಯ ವಾರ್ಡ್ ಬಾಯ್ ಅಲ್ಲದೆ ಯಮನಪಾತ್ರದಲ್ಲೂ ಅಭಿನಯಿಸಿದ್ದಾರೆ. ಬಾಲಕಲಾವಿದರಾದ ಸಾಕ್ಷಿ, ಅಷ್ಟವಿನ್ ಹಾಗೂ ಗೋವಿಂದ್ ಚಂದ್ರಶೇಖರ್, ನಂದಿನಿ, ಪ್ರಕಾಶ್ ಧೂಳೆ, ಜಿಸಿ ಶೇಖರ್, ನವೀನ್, ಆಶ್ವಿನಿ, ಚನ್ನವೀರಸ್ವಾಮಿ, ಶೇಖರ ಹುಬ್ಬಳ್ಳಿ, ಮಂಜು ಮರಿಹುಚ್ಚಣ್ಣವರ್, ಸುನೀಲ್ ಪೋತದಾರ್, ಮಹಾಂತೇಶ್ ವಜ್ರಮಟ್ಟಿ, ಎನ್.ಭುಜಂಗ್ ಮೋಯ್ಲಿ , ಸುರೇಶ್ ಪೂಜಾರ್ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಜೆ.ಇ.ಶಂಕರ್ ಅವರ ಛಾಯಾಗ್ರಹಣ, ಅಭಿನಂದನ ಮೇಕಪ್, ಸಂಗೀತ ಆಕಾಶ್ ಜಾಧವ್, ಡಾ.ಪ್ರಭು ಗಂಜಿಹಾಳ್ ಮತ್ತು ಡಾ.ವೀರೇಶ್ ಹಂಡಗಿ ಅವರ ಪತ್ರಿಕಾ ಸಂಪರ್ಕವಿದ್ದು ,ಕಥೆ,ಚಿತ್ರಕಥೆ, ಸಂಭಾಷಣೇ, ಗೀತರಚನೆ, ನಿರ್ದೇಶನ ಗುರುರಾಜ್ ಕಾಟೆ ಅವರದಿದ್ದು, ವೀರಣ್ಣ ವಿಠಲಾಪೂರ್ ಮತ್ತು ದಾವಲಸಾಬ್ ಹಂಚಿನಾಳರ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ.
ಮಾಧ್ಯಮ ಗೋಷ್ಟಿಯಲ್ಲಿ ನಿರ್ಮಾಪಕರಾದ ಶ್ರೀಮತಿ ಶೋಭಾ ರೇಣುಕುಮಾರ್ ಸಂಸ್ಥಾನಮಠ, ಕಲಾವಿದೆ ನಂದಿನಿ, ನಿರ್ದೇಶಕ ಗುರುರಾಜ ಕಾಟೆ , ಡಾ.ಪ್ರಭು ಗಂಜಿಹಾಳ್,ಡಾ.ವೀರೇಶ್ ಹಂಡಗಿ ಪಾಲ್ಗೊಂಡಿದ್ದರು.
----
-ಡಾ.ಪ್ರಭು ಗಂಜಿಹಾಳ್-೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.