Skip to main content

ರವಿಕಿರಣ್ ಚಲನ ಚಿತ್ರದ ಭಿತ್ತಿಚಿತ್ರ ಬಿಡುಗಡೆ

ರವಿಕಿರಣ್ ಚಲನ ಚಿತ್ರದ ಭಿತ್ತಿಚಿತ್ರ ಬಿಡುಗಡೆ
ಇಂದ prabhu
ಬರೆದಿದ್ದುNovember 10, 2018
noಅನಿಸಿಕೆ

ಮೈತ್ರಾ ಫಿಲಂಸ್ ಹುಬ್ಬಳ್ಳಿ ಲಾಂಛನದಲ್ಲಿ ಮೂಡಿಬರುತ್ತಿರುವ ರವಿಕಿರಣ್ ಮಕ್ಕಳ ಚಲನ ಚಿತ್ರದ ಭಿತ್ತಿಚಿತ್ರಗಳ(ಸ್ಟಿಕರ್ಸ)ನ್ನು ಶನಿವಾರ ಗದಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪೀಠಾಧೀಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಕಲ್ಲಯ್ಯಜ್ಜನವರು ರವಿ ಕಿರಣ ಚಿತ್ರ ಅಂಧ ಮಕ್ಕಳ ಬಾಳಿಗೆ ಬೆಳಕು ನೀಡುವ ಸಂದೇಶ ಹೊಂದಿದ್ದು ನೇತ್ರದಾನ ಮಹಾದಾನ ಎಂಬ ಸಂದೇಶ ಚಿತ್ರದಲ್ಲಿದೆ. ಎಲ್ಲರೂ ಚಿತ್ರ ನೋಡುವ ಮೂಲಕ ಉತ್ತರ ಕರ್ನಾಟಕದ ನಿರ್ಮಾಪಕರು, ಕಲಾವಿದರಿಗೆ ಬೆಂಬಲಿಸಬೇಕು ಎಂದರು. ಪುಣ್ಯಾಶ್ರಮದ ಶ್ರೀ ಸಿದ್ದಯ್ಯನವರು ಹಿಡ್ಕಿಮಠರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಚಿತ್ರ ಈ ತಿಂಗಳು ೩೦ರಂದು ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದ್ದು ಸೆನ್ಸಾರ್ ದಿಂದ ಯು ಸರ್ಟಿಫಿಕೇಟ್ ಪಡೆದಿದೆ ಎಂದು ಚಿತ್ರತಂಡದ ಡಾ.ಪ್ರಭು ಗಂಜಿಹಾಳ ಶ್ರೀಗಳಿಗೆ ತಿಳಿಸಿದರು. ಈ ಸಂದರ್ಬದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರೂ, ಕನ್ನಡ ಪ್ರಧ್ಯಾಪಕರೂ ಆದ ಡಾ.ಶಿವಣ್ಣ ಕುರಿ, ಪ್ರೊ.ಎಂ.ವಿ.ಗುರುಮಠ, ಡಾ.ರಾಜಶೇಖರ ದಾನರಡ್ಡಿ, ಡಾ.ಗಣೇಶ್ ಸುಲ್ತಾನಪೂರ್ ಮೊದಲಾದವರು ಇದ್ದರು.
ಕಥೆ,ಚಿತ್ರಕಥೆ,ಸಂಭಾಷಣೆ,ಗೀತರಚನೆ, ನಿರ್ದೇಶನ ಗುರುರಾಜ ಕಾಟೆ ಅವರದಿದ್ದು, ಚಿತ್ರದಲ್ಲಿ ನಿರ್ಮಾಪಕ ರೇಣುಕುಮಾರ್ ಸಂಸ್ಥಾನಮಠರು
ಆಸ್ಪತ್ರೆಯ ವಾರ್ಡ್ ಬಾಯ್ ಅಲ್ಲದೆ ಯಮನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.ಹಿರಿಯ ಕಲಾವಿದರಾದ ಡಾ.ಗೋವಿಂದ್ ಮಣ್ಣೂರ್ ಅಂಧನ ಪಾತ್ರ ನಿರ್ವಹಿಸಿದ್ದಾರೆ. ಕಲಾವಿದರಾದ ಸಾಕ್ಷಿ,ಅಷ್ಟವಿನ್, ನ್ಂದಿನಿ, ಆಶ್ವಿನಿ, ಪ್ರಕಾಶ್ ಧೂಳೆ, ಶೇಖರ ಹುಬ್ಬಳ್ಳಿ, ಓಂಕಾರೇಶ್, ಶೋಭಾ, ಭಾರತಿ, ಕಾಜಲ್, ರೋಸಲೀನ್, ಎನ್.ಭುಜಂಗ್ ಮೋಯ್ಲಿ,,ಜಿ.ಸಿ.ಶೇಖರ್, ಮಹಾಂತೇಶ್ ವಜ್ರಮಟ್ಟಿ, ಮಂಜು ಮರಿಹುಚ್ಚನ್ನವರ್, ಸುಭಾಸ್ ಪೂಜಾರ್ ಮೊದಲಾದವರು ಚಿತ್ರದಲ್ಲಿದ್ದಾರೆ.ಛಾಯಾಗ್ರಹಣ ಜೆ.ಇ.ಶಂಕರ್, ಪ್ರಕಾಶ್ ನೃತ್ಯ, ಅಭಿನಂದನ್ ಪ್ರಸಾಧನ, ಆಕಾಶ್ ಸಂಗೀತ, ಡಾ.ಪ್ರಭು ಗಂಜಿಹಾಳ್, ಡಾ.ವೀರೇಶ್ ಹಂಡಗಿ ಪತ್ರಿಕಾ ಸಂಪರ್ಕ ಚಿತ್ರಕ್ಕಿದ್ದು ವೀರಣ್ಣ ವಿಠಲಾಪೂರ್, ದಾವಲಸಾಬ ಹಂಚಿನಾಳ್ ನಿರ್ಮಾಣ ನಿರ್ವಹಣೆ ಹೊತ್ತಿದ್ದಾರೆ.

- ವರದಿ-ಪ್ರಭು ಗಂಜಿಹಾಳ್-೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.