Skip to main content

ಹೊಳೆಆಲೂರಲ್ಲಿ ವಿಶ್ವಕರ್ಮ ಜಯಂತಿ

ಹೊಳೆಆಲೂರಲ್ಲಿ ವಿಶ್ವಕರ್ಮ ಜಯಂತಿ
ಇಂದ prabhu
ಬರೆದಿದ್ದುOctober 8, 2018
noಅನಿಸಿಕೆ

ಹೊಳೆಆಲೂರಿನ ಗಾಡಗೋಳಿ ರಸ್ತೆಯಲ್ಲಿರುವ್ ಶ್ರೀ ಯಚ್ಚರೇಶ್ವರ ಬಾಲವಿಕಾಸ್ ವಿದ್ಯಾಮಂದಿರದ ಆವರಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ವಿಶ್ವಕರ್ಮಾ ಯುವಕ ಸಂಘ ಹಾಗೂ ಗಾಯತ್ರಿ ಮಹಿಳಾ ಮಂಡಳ ವತಿಯಿಂದ ವಿಶ್ವಕರ್ಮ ಜಯಂತಿ, ಧಾರ್ಮಿಕ ಸಭೆ, ಸಮಾಜದ ಪ್ರತಿಭಾನ್ವಿತ ಶಿಲ್ಪಿಗಳಿಗೆ ಸನ್ಮಾನ ಸಮಾರಂಭ ಜರುಗಿತು.
ವಿಶ್ವಕರ್ಮ ಸಮಾಜದ ಮಹಿಳೆಯರ ಪೂರ್ಣ ಕುಂಭಗಳೊಂದಿಗೆ ಗ್ರಾಮದ ಶ್ರೀ ಯಚ್ಚರೇಶ್ವರ ಮಠದಿಂದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ನಂತರ ನಡೆದ ಸಮಾರಂಭದ ಸಾನಿಧ್ಯವನ್ನು ಶ್ರೀ ಯಚ್ಚರೇಶ್ವರ ಸ್ವಾಮಿಗಳು, ನವಲಗುಂದದ ಶ್ರೀ ವೀರೇಂದ್ರ ಸ್ವಾಮಿಗಳು ವಹಿಸಿದ್ದರು. ಉಭಯ ಶ್ರೀಗಳು ದೀಪ ಬೆಳಗಿಸುವ ಮೂಲಕ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ವಿಡಾನ ಪರಿಷತ್ ಸದಾಸ್ಯ್ ಪ್ರೊ.ಎಸ್.ವಿ.ಸಂಕನೂರ್ ಆಗಮಿಸಿದ್ದರು. ಪ್ರಾಸ್ತಾವಿಕವಾಗಿ ಬಿ.ಆರ್.ಬಡಿಗೇರ್ ಮಾತನಾಡಿದರು. ಪಾಂಡುರಂಗ ಪತ್ತಾರ ಲಿಖಿತ ಮನವಿಯನ್ನು ಅರ್ಪಿಸಿದರು.
ಇದೆ ಸಂದರ್ಭದಲ್ಲಿ ನರೇಗಲ್ ವಿಶಾಲಾಕ್ಷಿ ಹೊಸಮನಿ, ಲೋಹಶಿಲ್ಪಿ ಮುದಕಪ್ಪ ಬಡಿಗೇರ್, ರಥಶಿಲ್ಪಿ ಲಕ್ಷ್ಮಣಾ ಬಡಿಗೇರ್, ಶಿಲಾಶಿಲ್ಪಿ ಈರಣ್ಣ ಬಡಿಗೇರ್, ಸುವರ್ಣಶಿಲ್ಪಿ ರಾಮಣ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಪತಿ ಉಡುಪಿ, ಎ.ಎನ್.ಬಡಿಗೇರ್, ಯೋಗೀಶ್ ಕಮ್ಮಾರ್, ಮೌನೇಶ್ ಅಕ್ಕಸಾಲಿಗ್ , ಯಚ್ಚರಪ್ಪ ಪತ್ತಾರ್, ಮೌ ನೇಶ್ ಬಡಿಗೇರ್, ಪ್ರಲ್ಹಾದ ಅಕ್ಕಸಾಲಿಗ್ , ಮಹಿಳಾ ಸಂಘದ ಅಧ್ಯಾಕ್ಷೆ ಪಾರ್ವತಿ ಕಮ್ಮಾರ್, ಸ್ಂತೋಷ, ರಂಗನಾಥ ಬಡಿಗೇರ್ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.

--------
--ಪ್ರಭು.ಗಂಜಿಹಾಳ್-೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.