Skip to main content

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ

ಇಂದ prabhu
ಬರೆದಿದ್ದುNovember 25, 2017
noಅನಿಸಿಕೆ

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ ರವಿಕಿರಣ ಮಕ್ಕಳ ಚಲನ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತ ಭರದಿಂದ ಸಾಗಿದೆ.ಉತ್ತರ ಕರ್ನಾಟಕದ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ಮಾಪಕರು ಮತ್ತು ನಿರ್ದೇಶಕ ಗುರುರಾಜ್ ಕಾಟೆ ಅವರು ಕಥೆ, ಚಿತ್ರಕಥೆ,ಸಂಭಾಷಣೆ, ಗೀತರಚನೆ, ನಿರ್ದೇಶನದಲ್ಲಿ ಚಿತ್ರೀಕರಣ ನಡೆದಿದೆ. ಮಕ್ಕಳ ಮನಸ್ಸು ಹೇಗಿರುತ್ತದೆ ? ಅಂಧ ಮಕ್ಕಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಬಾಲ ಕಲಾವಿದೆ ಸಾಕ್ಷಿ ಅಂಧ ಪಾತ್ರಕ್ಕೆ ಜೀವ ತುಂಬಿದ್ದು ಅವಳ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಬಾಲ ಕಲಾವಿದ ಅಷ್ಟವಿನ್ ಕೂಡ ಮೊದಲ ಸಲ ಕ್ಯಾಮರಾ ಎದುರಿಸಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಈಗಾಗಲೆ ಶೇಕಡಾ ೯೫ರಷ್ಟು ಚಿತ್ರೀಕರಣ ಮುಗಿದಿದ್ದು , ನಾಟಿವೈದ್ಯರ ಚಿಕಿತ್ಸೆಯಿಂದಾಗುವ ಎಡವಟ್ಟು, ಮತ್ತು ಆಸ್ಪತ್ರೆಯಲ್ಲಿನ ಪ್ರಮುಖ ದೃಶ್ಯಗಳಲ್ಲದೆ , ಹುಟ್ಟುಹಬ್ಬದ ಹಾಡಿನ ಚಿತ್ರೀಕರಣ ಸಹಬಾಲ ಕಲಾವಿದರ ನೃತ್ಯದಲ್ಲಿ ಮತ್ತು ನಮ್ಮೀದೇಶ ಭಾರತದೇಶ ಎಷ್ಟು ಸುಂದರ ಎಂಬ ದೇಶಭಕ್ತಿ ಸಾರುವ ಹಾಡಿನ ಚಿತ್ರದ ಚಿತ್ರೀಕರಣವನ್ನು ನೂರಾರು ವಿದ್ಯಾರ್ಥಿಗಳೊಂದಿಗೆ ಕ್ಯಾಮರಾಮನ್ ಜೆ.ಇ.ಶಂಕರ್ ಚಿತ್ರೀಕರಿಸಿದ್ದಾರೆ. ಇದೀಗ ಕ್ಲೈಮಾಕ್ಸ್ ಚಿತ್ರೀಕರಣ ನಡೆದಿದ್ದು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ರವಿಯ ಸಾವಿನ ದೃಶ್ಯದ ಜೊತೆಗೆ ತಂದೆ-ತಾಯಿಗಳ ದು:ಖದ ಸನ್ನಿವೇಶವನ್ನು ಚಿತ್ರೀಕರಿಸಲಾಯಿತು. ರವಿಯ ಸಾವಿನ ನಂತರ ದು:ಖದಲ್ಲೂ ಪಾಲಕರು ಕೈಗೊಂಡ ನಿರ್ಧಾರ ಎಂಥದ್ದು ಎಂಬುದನ್ನು ತೆರೆಯ ಮೇಲೆಯೆ ನೋಡಬೇಕು. ಈ ವಾರದಲ್ಲಿ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಳಿಸಿ ಮಾತಿನ ಮನೆಗೆ ಸಾಗಲಿದೆ ಎಂದು ನಿರ್ದೇಶಕ ಗುರುರಾಜ್ ಕಾಟೆ, ನಿರ್ಮಾಪಕ ರೇಣುಕುಮಾರ್ , ಸಹನಿರ್ಮಾಪಕ ಮಹಾಂತೇಶ್ ವಜ್ರಮಟ್ಟಿ ತಿಳಿಸಿದ್ದಾರೆ. ಮೈತ್ರಾ ಫಿಲಂಸ್ ಹುಬ್ಬಳ್ಳಿ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಿರ್ಮಾಪಕ ಜೆ.ಜಿ.ಸಂಸ್ಥಾನಮಠರು ಆಸ್ಪತ್ರೆಯ ವಾರ್ಡಬಾಯ್ ಅಲ್ಲದೆ ಯಮನಪಾತ್ರದಲ್ಲೂ ಅಭೂತ ಪೂರ್ವವಾಗಿ ಅಭಿನಯಿಸಿದ್ದಾರೆ. ಸಹನಿರ್ಮಾಪಕ ಮಹಾಂತೇಶ್ ವಜ್ರಮಟ್ಟಿ ಅವರೂ ವೈದ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಗರದ ಹಿರಿಯ ಕಲಾವಿದರೂ ವೈದ್ಯರಾದ ಡಾ.ಗೋವಿಂದ ಮಣ್ಣೂರ್ ಅಂಧನ ಪಾತ್ರ ನಿರ್ವಹಿಸುವ ಮೂಲಕ ವಿಶೇಷ ಗಮನ ಸೆಳೆಯುತ್ತಿದ್ದಾರೆ. ಇನ್ನುಳಿದಂತೆ ಕಲಾವಿದರಾದ ರೇಣುಕುಮಾರ್, ಸಾಕ್ಷಿ, ಅಷ್ಟವಿನ್, ನಂದಿನಿ, ನವೀನ, ಅಶ್ವಿನಿ, ಚನ್ನವೀರಸ್ವಾಮಿ, ಪ್ರಕಾಶ್ ಧೂಳೆ, ಶೇಖರ್ ಹುಬ್ಬಳ್ಳಿ, ಓಂಕಾರೇಶ್, ಶೋಭಾ, ಭಾರತಿ, ಪೂಜಾ, ಸ್ನೇಹ, ಕಾಜಲ, ರೋಸಲಿನ್, ಆಶ್ರಫ್, ಎನ್.ಭುಜಂಗ್ ಮೋಯ್ಲಿ, ಜಿ.ಸಿ.ಶೇಖರ್, ಮಹಾಂತೇಶ್ ವಜ್ರಮಟ್ಟಿ, ಶಫೀ,ಆಯ್.ಆಯ್.ನವಲೂರ, ಅಬ್ದುಲ್ ಮಕಾನದಾರ್, ಎಂ.ಆಯ.ಚಿತ್ತೇವಾಲಿ, ಮಂಜು ಮರಿಹುಚ್ಚಣ್ಣವರ್, ಸುಭಾಸ್ ಪೂಜಾರ್ ಮೊದಲಾದವರು ಅಭಿನಯಿಸುತ್ತಿದ್ದಾರೆ. ಪ್ರಕಾಶ್ ಅವರ ನೃತ್ಯ,ಅಭಿನಂದನ್ ಪ್ರಸಾಧನ, ಆಕಾಶ್ ಸ್ಂಗೀತ, ಡಾ.ಪ್ರಭು.ಗಂಜಿಹಾಳ ಪ್ರಚಾರಕಲೆ, ಡಾ.ವೀರೇಶ್ ಹಂಡಗಿ ಪತ್ರಿಕಾ ಸಂಪರ್ಕ, ಚಿತ್ರಕ್ಕಿದ್ದು ವೀರಣ್ಣ ವಿಠಲಾಪೂರ್, ದಾವಲಸಾಬ್ ಹಂಚಿನಾಳ ನಿರ್ಮಾಣದ ನಿರ್ವಹಣೆ ಹೊತ್ತಿದ್ದಾರೆ. ----------------------------- ಇಂದ್- ಡಾ.ಪ್ರಭು.ಗಂಜಿಹಾಳ್ - 9448775346 ಡಾ.ವೀರೇಶ್ ಹಂಡಗಿ

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.