Skip to main content

ಹೊಸ್ತಿಲು / ಹೊಸಿಲು / ಹೊಸಲು

ಬರೆದಿದ್ದುOctober 29, 2017

ಅರ್ಥ: ಮನೆ ಅಥವಾ ಕೋಣೆಯ / ರೂಮಿನ ಬಾಗಿಲಿನ ಕೆಳಗೆ ಇರುವ ಕಟ್ಟಿಗೆ ಅಥವಾ ಕಲ್ಲಿನ ಪಟ್ಟಿ. ಬಾಗಿಲ ಚೌಕಟ್ಟಿನ ಕೆಳಗಿನ ಪಟ್ಟಿ. ಮನೆಯ ಒಳಗೆ ಅಥವಾ ಹೊರಗೆ ಹೋಗಲು ಇದನ್ನು ದಾಟಿ ಹೋಗಬೇಕು.

ಪೊಸಂ + ತಿಲ್ = ಪೊಸಂತಿಲು ಅಥವಾ ಪೊಸ + ತಿಲು = ಪೊಸತಿಲು ಹೊಸ + ತಿಲು = ಹೊಸತಿಲು

ಅಂದರೆ ಮನೆಯ ಪ್ರಾರಂಭದ ಭಾಗ ಎಂದರ್ಥ .

ಇದಕ್ಕೆ ಪ್ರಾರಂಭದಲ್ಲಿರುವ ಅನ್ನುವ ಅರ್ಥ ಕೂಡ ಇದೆ. ಉದಾ: ಯೌವನದ ಹೊಸ್ತಿಲಲ್ಲಿ ಅಥವಾ ವೃದ್ದಾಪ್ಯದ ಹೊಸ್ತಿಲಲ್ಲಿ

ಉದಾಹರಣೆ:

1. ಮನೆಯ ಹೊಸ್ತಿಲು / ಹೊಸಿಲು ದಾಟಿ ಹೋದ ಆಕೆ ಮತ್ತೆ ಬರಲಿಲ್ಲ.

2. ಹೊಸಲು ದಾಟಿ ಬಂದರೆ ನೋಡು ನಿನ್ನ ಬಿಡುವದಿಲ್ಲ.

3. ಗೃಹ ಪ್ರವೇಶದ ದಿನ ಮನೆ ದ್ವಾರದ ಹೊಸ್ತಿಲು ಪೂಜೆ ನಡೆಸಲಾಯ್ತು.

4. ಯೌವನದ ಹೊಸ್ತಿಲಲ್ಲಿ ಇದ್ದ ವಿದ್ಯಾರ್ಥಿಗಳು ಕಿವಿಮಾತನ್ನು ತಲೆಗೆ ಹಾಕಿಕೊಳ್ಳಲಿಲ್ಲ.

ಇದೇ ಅರ್ಥದ ಪದಗಳು: 

ಬಾಗಿಲು ಮೆಟ್ಟಲು, ಗಡಿ, ಅಂಚು, ಪ್ರಾರಂಭದಲ್ಲಿರುವ

ವಿರುದ್ಧ ಅರ್ಥದ ಪದಗಳು:

ಹಿತ್ತಿಲು - ಮನೆಯ ಹಿಂಭಾಗ 

ಮೂಲ:

ಹಳೆಗನ್ನಡ 

ಬಳಕೆ: ಹೊಸ್ತಿಲು ಪದ ಬರಹದಲ್ಲಿ ಬಳಕೆ ಜಾಸ್ತಿ. ಹೊಸಲು ಆಡು ಮಾತಲ್ಲಿ ಜಾಸ್ತಿ. 

ಈ ಪದ ಆಧಾರಿತ ಪದಗಳು:

ಹೊಸ್ತಿಲಲ್ಲಿ, ಹೊಸ್ತಿಲನ್ನು

ಬೇರೆ ಭಾಷೆಗಳಲ್ಲಿ

ಇಂಗ್ಲೀಷ್: ಥ್ರೆಶ್ ಹೋಲ್ಡ್
ಹಿಂದಿ:   ದ್ವಾರ್,  ದೆಹಲಿ, ಸೀಮಾ ರೇಖಾ
ಸಂಸ್ಕೃತ: ದ್ವಾರಂ

 

Hostilu / Hosilu / Hosalu in English

Kannada English Meaning
Hostilu / Hosilu / Hosalu Threshhold

 

 होस्तिलु / होसिलु / होसलु हिन्दी मे अर्थ

कन्नडा हिन्दी मे अर्थ
होस्तिलु / होसिलु / होसलु द्वारं / सीमा रेखा

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ