Skip to main content

ಸುಧಾ / ಸುಧೆ

ಬರೆದಿದ್ದುOctober 21, 2017

ಅರ್ಥ 1

ಸುಧಾ ಎಂದರೆ ಹೂವಿನ ಮಕರಂದ, ಅಮೃತ ಎಂದರ್ಥ. ಅಂದರೆ ಹೂವಿನಲ್ಲಿ ಕೀಟಗಳನ್ನು ಆಕರ್ಷಿಸಲು ಸೂಸುವ ರಸ. ಸಂಸ್ಕೃತ ಮೂಲದ ಸುಧಾ ಕನ್ನಡದಲ್ಲಿ ಸುಧೆ ಎಂಬ ರೂಪದಲ್ಲಿ ಕೂಡಾ ಇದೆ.

ಉದಾಹರಣೆ:

  • ಎಲ್ಲರಿಗೂ ಅಧ್ಯಾತ್ಮದ ಸುಧೆ ಹಂಚಿದ ಹರಿದಾಸರು.
  • ಜನಪ್ರಿಯ ಗಾಯಕ ಅಮೋಘ ಅವರ ಗಾಯನ ಸುಧೆ ಸವಿಯಲು ಕಾತರದಿಂದ ಕಾಯುತ್ತಿದ್ದೇವೆ.

ಇದೇ ಅರ್ಥದ ಪದಗಳು: 

ಮಕರಂದ, ಅಮೃತ, ಸುಧೆ

ಮೂಲ:

ಸಂಸ್ಕೃತ

ಬಳಕೆ:

ಈ ಪದ ಬರಹಗಳಲ್ಲಿ ಕಾಣ ಸಿಗುತ್ತದೆ.

ಈ ಪದ ಆಧಾರಿತ ಪದಗಳು:

ಗಾನ ಸುಧಾ

ಅರ್ಥ 2

ಸುಧಾ ಎಂಬುದು ಪ್ರಜಾವಾಣಿ ಬಳಗದ ವಾರಪತ್ರಿಕೆ ಹೆಸರು ಕೂಡಾ.

ಉದಾಹರಣೆ:

ಯಾಕೋ ಈ ವಾರದ ಸುಧಾ ಇನ್ನೂ ಬಂದಿಲ್ಲ.

ಅರ್ಥ 3

ಹುಡುಗಿಯ ಹೆಸರು.

ಬೇರೆ ಭಾಷೆಗಳಲ್ಲಿ

ಇಂಗ್ಲೀಷ್: ನೆಕ್ಟರ್
ಹಿಂದಿ: ಸುಧಾ, ಮಕರಂದ
ಸಂಸ್ಕೃತ: ಸುಧಾ

in English

Kannada English Meaning
Sudha Nector

 हिन्दी मे अर्थ

कन्नडा हिन्दी मे अर्थ
सुधा सुधा, मकरंद

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ