Skip to main content

ನಿರಂತರ

ಬರೆದಿದ್ದುOctober 8, 2017

ಅರ್ಥ:  (ಗುಣವಾಚಕ + ಕ್ರಿಯಾವಿಶೇಷಣ) ಅಂತರ ಎಂದರೆ  ಎರಡು ವಸ್ತುಗಳ, ಘಟನೆಗಳ ನಡುವಿನ ದೂರ. ನಿರ್ + ಅಂತರ = ನಿರಂತರ ನಿರ್ ಒಂದು ಉಪಸರ್ಗ. ಇಲ್ಲಿ ನಿರ್ ಪದದ ಸೇರಿಕೆಯು ವಿರುದ್ಧ ಅರ್ಥ ನೀಡುತ್ತದೆ. ಅಂದರೆ ನಡುವೆ ಅಂತರ ಇಲ್ಲದೇ ಸತತವಾಗಿರುವ.

ಉದಾಹರಣೆ:

೧. ನಿರಂತರವಾದ ಪ್ರಯತ್ನದಿಂದ ಅವರು ಈ ಸಾಧನೆಯನ್ನು ಮಾಡಿದ್ದಾರೆ. (ಗುಣವಾಚಕ)

೨. ನಿರಂತರವಾಗಿ ಹರಿಯುವ ನದಿಯು ಕಾಡನ್ನು ಹಸಿರಾಗಿಟ್ಟಿದೆ.(ಕ್ರಿಯಾ ವಿಶೇಷಣ)

೩. ನಗರದಲ್ಲಿ ನಿರಂತರ ಮಳೆ ಸುರಿದು ಜನ ಪರದಾಡುವಂತಾಯ್ತು. (ಗುಣವಾಚಕ)

ಇದೇ ಅರ್ಥದ ಪದಗಳು: 

ಎಡಬಿಡದ, ಅವಿರತ, ಅನವರತ, ಒಂದೇ ಸಮನೆ, ಸತತ

ಮೂಲ:

ಸಂಸ್ಕೃತ

ಬಳಕೆ: 

ಸಾಮಾನ್ಯವಾಗಿ ಈ ಪದ ಬರಹಗಳಲ್ಲಿ ಹೆಚ್ಚು ಬಳಕೆ ಆಗುತ್ತದೆ. ಪುಸ್ತಕ, ಪತ್ರಿಕೆಗಳಲ್ಲಿ ಅಥವಾ ಬ್ಲಾಗ್ ಬರಹಗಳಲ್ಲಿ ಕಾಣ ಸಿಗುತ್ತದೆ.

ಈ ಪದ ಆಧಾರಿತ ಪದಗಳು:

ನಿರಂತರ ಖರ್ಚು / ಆದಾಯ / ಕಾರ್ಯಕ್ರಮ / ಮಳೆ / ಹರಿವು / ಪ್ರಯತ್ನ / ಪರಿಶ್ರಮ / ಬೇಡಿಕೆ
ನಿರಂತರವಾಗಿ
ನಿರಂತರವಾದ
ನಿರಂತರತೆ
ನಿರಂತರ ಪೀಡಿಸು

ಬೇರೆ ಭಾಷೆಗಳಲ್ಲಿ

ಇಂಗ್ಲೀಷ್: ಕಂಟಿನ್ಯೂಯಸ್
ಹಿಂದಿ: ನಿರಂತರ್
ಸಂಸ್ಕೃತ: ನಿರಂತರ

 

Nirantara in English

Kannada English Meaning
nirantara continuous, perpetual, eternal

 

 हिन्दी मे अर्थ

कन्नडा हिन्दी मे अर्थ
निरंतर निरंतर

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ