ನಮ್ಮ ನಮ್ಮಲ್ಲೇ ಈ ಕಚ್ಚಾಟ ಬೇಕೇ..?

ಹಿಂದೂ ಧರ್ಮದವರು ಎಂದು ಮೇಲೆ ಮಾತ್ರ ಹೇಳಿಕೊಳ್ಳುತ್ತಾ ಈಗ ದೈನಂದಿನ ನಡೆಯುತ್ತಿರುವಂತೆ ಒಳಗೊಳಗೇ ಸಣ್ಣ ಸಣ್ಣ ಜಾತಿ ಪಂಥ ಗಳೂ ನಮ್ಮದು ಬೇರೆಯೇ ಧರ್ಮ ಇದರಿಂದ ಬೇರೆ ಎಂದು ಪರಿಗಣಿಸಿ ಎಂದು ಕಚ್ಚಾಡುತ್ತಿದ್ದರೆ ಅಂತಹಾ ಸಮಯದಲ್ಲಿ
ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಇಂತಹಾ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳದೆ ಸುಮ್ಮನೆ ಇರುತ್ತಾರೆಯೇ..? ಇತ್ತೀಚೆಗೆ ನಡೆಯುತ್ತಿರುವ ಈ ವಿದ್ಯಮಾನ ನಮಗೇಕೆ ಅಚ್ಚರಿ ಉಂಟು ಮಾಡುತ್ತಿಲ್ಲ..? ನನಗಿರುವ ಅಲ್ಪ ಮತ್ತು ಸಾಮಾನ್ಯ ಜ್ಞಾನದಲ್ಲಿ ಹೇಳುವುದಾದರೆ ಮಾನವೀಯತೆ ಕರುಣೆ ದಯೆ ಇಲ್ಲದ ಧರ್ಮ ಒಂದು ಧರ್ಮವೇ ಅಲ್ಲ. ವಿಶ್ವ ಬ್ರಾತೃತ್ವ, ಸಮಾನತೆ ಮತ್ತು ಮಾನವೀಯತೆಯ ಒಳಿತಿಗೆ ಮಾರ್ಗದರ್ಶನ ನೀಡುವ ಧರ್ಮವೇ ನಿಜವಾದ ಧರ್ಮ ಮತ್ತು ನಾನದರ ಪಾಲಕ.

ಚೀನಾದ ಬಹುತೇಕ ಭಾಗಗಳಲ್ಲಿ, ಮಿಯೆನ್ಮಾರ್, ಭೂತಾನ್ ಮತ್ತಿತರೆ ಪೂರ್ವೋತ್ತರ ಏಷ್ಯಾ ದಲ್ಲಿ ಬೌದ್ಧ ಧರ್ಮದ ಅನುಯಾಯಿಗಳಿದ್ದು ಆ ಧರ್ಮದ ಪ್ರತಿಪಾದಕರಾದ ಭಗವಾನ್ ಭುದ್ಧ ಈ ನಮ್ಮ ಹಿಂದೂ ದೇಶದಲ್ಲೇ ಹುಟ್ಟಿ ಬೆಳೆದು ನಿರ್ವಾಣ ಹೊಂದಿದ್ದರೂ ಆ ಭುದ್ಧ ಧರ್ಮ ಹಿಂದೂ ಧರ್ಮದಿಂದ ಬೇರೆಯೇ ಎಂದು ಪರಿಗಣಿಸಲಾಯ್ತು . ಆಫ್ಘಾನಿಸ್ತಾನದಲ್ಲೂ ಭೌದ್ಧ ಧರ್ಮ ಸಾಕಷ್ಟು ಪ್ರಸಾರಣೆ ಆಗಿತ್ತು ಆದರೆ ಅದನ್ನು ಅಲ್ಲಿನ ಮತ್ತೊಂದು ಧರ್ಮದವರು ನಾಶಪಡಿಸಿದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇಂದೂ ಜೀವಂತ ಸಾಕ್ಷಿಗಳಾಗಿ ನಿಂತಿವೆ.

ಭಗವಾನ್ ಮಹಾವೀರರು ಜೈನ ಧರ್ಮದ ಪ್ರತಿಪಾದಕರಾಗಿ ಅದೇ ಒಂದು ಬೇರೆ ಧರ್ಮವೇ ಆಗಿಬಿಟ್ಟಿತು. ಅದೇ ಹಾದಿಯಲ್ಲಿ ಗುರುನಾನಕ್ ಅವರು ಸಿಖ್ ಧರ್ಮದ ಪ್ರತಿಪಾದಕರಾಗಿ ಅದೇ ಒಂದು ಧರ್ಮ ಆಗಿ ಒಡೆದು ಹೋಯ್ತು. ಹಿಂದೂ ಧರ್ಮದಲ್ಲಿ ಹುಟ್ಟಿ ( ಇತಿಹಾಸದ ಪ್ರಕಾರ ಹಿಂದೂ ಎಂದರೆ ಇಂಡಸ್ ನದಿ ಇಂದಿನ ಸಿಂಧು ನದಿಯ ದಂಡೆಗಳಲ್ಲಿ ವಾಸ ಮಾಡಲು ಶುರು ಮಾಡಿದವರು ಎಂದು ನಂಬಲಾಗಿದೆ) ಕಾಲಕ್ರಮೇಣ ಅದು ಹಿಂದುಗಳು ಎಂದು ಗುರುತಿಸಿಕೊಂಡು ಒಂದು ಧರ್ಮದ ರೂಪ ತಳೆಯಿತೆಂದು ಇತಿಹಾಸ ತಜ್ಞರು ಹೇಳುತ್ತಾರೆ. ಅವರು ನಂಬಿ ಪೂಜಿಸುವ ದೈವ ದೇವತೆಗಳನ್ನೂ ಪೂಜಿಸುವ ಆ ಮೂರೂ ಧರ್ಮಗಳು ಮೂಲತಃ ಹಿಂದೂ ಧರ್ಮವೇ ಆಗಿರಬೇಕಿತ್ತು. ಆ ಬಸವಣ್ಣನವರು ಎಲ್ಲಾ ಮಾನವರೂ ಒಂದೇ ಜಾತಿ ಧರ್ಮ ಎಂದು ಪ್ರತಿಪಾದಿಸಿ ಜಾತಿ ಮುಕ್ತ ಮಾಡಲು ಹೊರಟಿದ್ದು ಆ ಕಾಲದಲ್ಲೇ ಕೆಲವು ಧರ್ಮಧರ್ಶಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಆ ಒಗ್ಗಟ್ಟನ್ನು ಮುರಿದುಕೊಂಡು ಮತ್ತೊಂದು ಧರ್ಮ ಹುಟ್ಟಿಸಲು ಮುಂದಾಗಿದ್ದಾರೆ ಕೆಲವು
ನಕಲೀ "ಧರ್ಮ ಗುರುಗಳು" ಮತ್ತು ರಾಜಕಾರಣಿಗಳು.

ಬಹಳ ವರ್ಷಗಳ ಹಿಂದೆಯೇ ಬೇರೆ ಬೇರೆ ದೇಶಗಳಿಂದ ಬಂದು ಮೂಲ ನಿವಾಸಿಗಳಾದ ಹಿಂದೂ ಗಳ ಮೇಲೆ ಆಕ್ರಮಣ ಮಾಡಿ ನಮ್ಮ ಸ್ಥಳಗಳನ್ನು ಆಕ್ರಮಿಸಿಕೊಂಡು ಇಲ್ಲೇ ಉಳಿದುಕೊಂಡ ಇಸ್ಲಾಮ್ ಕ್ರೈಸ್ತ ಸಿಂಧೀ ಯೆಹೂದಿ ಇತ್ಯಾದಿ ಧರ್ಮಗಳವರು ಆ ಸಮಯದಲ್ಲಿ ಕಷ್ಟ ಪಡುತ್ತಿದ್ದವವರನ್ನು, ಅಸಹಾಯಕರನ್ನು ಹೆದರಿಸಿ ಬೆದರಿಸಿ ಆಮಿಷ ತೋರಿ ತಮ್ಮ ತಮ್ಮ ಧರ್ಮಗಳಿಗೆ ಮತಾಂತರಿಸಿಕೊಂಡು ಇಲ್ಲೇ ತಮ್ಮ ಸಾಮ್ರಾಜ್ಯ ಸ್ಥಾಪಿಸಿ
ಕಾಲಕ್ರಮೇಣ ತಮ್ಮ ತಮ್ಮ ನಡುವೆಯೇ ದ್ವೇಷ ಭಾವನೆ ಹುಟ್ಟುಕೊಳ್ಳುವಂತೆ ಮಾಡುವಲ್ಲಿ ಕಾರಣೀಭೂತರಾಗಿ ಯಶಸ್ವಿ ಆಗಿದ್ದು ಇತಿಹಾಸವೇ ಸರಿ. ಹಾಗಾಗಿ ಮೂಲತಃ ಈ ಹಿಂದೂ ರಾಷ್ಟ್ರ ಕೇವಲ ಹಿಂದೂಗಳದ್ದೇ ಆಗಿರಬೇಕಿತ್ತು ಆದರೆ ಹಾಗಾಗಲಿಲ್ಲ. ವಿಶ್ವ ಧರ್ಮ ಭ್ರಾತೃತ್ವ ವನ್ನು ಸನಾತನ ಧರ್ಮದ ಅನುಯಾಯಿಗಳು ಮತ್ತು ಧರ್ಮ ಪ್ರಚಾರಕರಾಗಿ ಪ್ರಮುಖ ಸ್ಥಾನ ವಹಿಸಿದ್ದ ಸ್ವಾಮಿ ವಿವೇಕಾನಂದರಂತಾ ಕೆಲವು ಮಹಾಶಯರು ವಿಶ್ವದೆಲ್ಲೆಡೆ ಸಂಚರಿಸಿ ಎಲ್ಲರಿಗೂ ನಮ್ಮ ಹಿಂದೂ ಧರ್ಮದ ಭಗ್ಗೆ ಭೋದಿಸುತ್ತಾ ಪ್ರಸಿದ್ದಿ ಪಡೆದರು. ಅದನ್ನೇ ಅನುಸರಿಸಿ ಬಂದ ನಮಗೆ ಇಂದು ಇಲ್ಲಿ ನೆಲೆಯಿಲ್ಲದಂತಾಗಿ ಪರಕೀಯರಿಗೆ ಹಂಚಿಹೋಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.

ಕೆಲವು ಧರ್ಮಾಧಿಕಾರಿಗಳು ಹಿಂದೂ ಧರ್ಮದಲ್ಲಿರುವ ಜ್ಞಾನ ಭಂಡಾರವನ್ನು ಗುಟ್ಟಿನ ವಿಷಯ ಎಂದು ತಮ್ಮ ತಮ್ಮಲ್ಲೇ ಮುಚ್ಚಿಟ್ಟುಕೊಂಡು ಅವರವರಲ್ಲೇ ಕಿವಿಯಿಂದ ಕಿವಿಗೆ ವರ್ಗಾಯಿಸುತ್ತಾ ಸ್ವತಂತ್ರವಾಗಿ ಪ್ರಸರಿತವಾಗಲು ಎಡೆ ಮಾಡಿಕೊಡದೆ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಾ ಒಗ್ಗಟ್ಟಿಲ್ಲದೆ ಇದ್ದುದರಿಂದ ಅವರವರಲ್ಲೇ ಜಾತಿ ಉಪಜಾತಿ ಮೇಲು ಕೀಳು ಎಂಬ ಕಿತ್ತಾಟ ಮಾಡುವುವುದಕ್ಕೆ ಕಾರಣವಾಯ್ತು. ಈ ರೀತಿ ನಾನು ಮೇಲು ನೀನು ಕೀಳು ಎಂಬ ಬೇಧ ಭಾವ ಎಲ್ಲೀವರೆಗೂ ಇರುತ್ತದೆಯೋ ಅಲ್ಲೀವರೆಗೂ ಧರ್ಮದ ಹೆಸರಿನಲ್ಲಿ ನಮ್ಮ ರಾಜಕಾರಣಿಗಳು ಪುಡಾರಿಗಳು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಒಂದು ಜಾತಿಯವರನ್ನು ಮತ್ತೊಂದು ಜಾತಿಯವರ ವಿರುದ್ಧ ಎತ್ತಿ ಕಟ್ಟಿ ತಮಾಷೆ ನೋಡುತ್ತಾ ಧರ್ಮ ದ್ರೋಹಿಗಳಾಗಿ ಕೆಲಸ ಮಾಡುತ್ತಿರುವ ಇಂದಿನ ದಿನ ನಾವೆಲ್ಲರೂ ಒಂದೇ ಹಿಂದೂ ದೇಶದವರು ಎಂದು ಸೋದರ ಮನೋಭಾವನೆಯಿಂದ ಒಗ್ಗಟ್ಟಿನಿಂದ ಸಹಬಾಳ್ವೆ ಯತ್ತ ಹೆಜ್ಜೆಯಿಟ್ಟು ಮುನ್ನಡೆಯದ ಹೊರತು ರಾಷ್ಟ್ರ ಮತ್ತು ಧರ್ಮ ದ್ರೋಹಿಗಳು ಈ ನಮ್ಮ ದೇಶವನ್ನು ಅನಾಗರೀಕ ದೇಶ ವನ್ನಾಗಿ ಛಿದ್ರ ಛಿದ್ರ ಮಾಡಿ ಸಣ್ಣ ಸಣ್ಣ ಜಾತಿ ಗಳನ್ನು ಧರ್ಮಗಳನ್ನಾಗಿ ಮಾಡುತ್ತಾ ಮೂಲ ಹಿಂದೂ ಸಾಮ್ರಾಜ್ಯವನ್ನು ಒಡೆಯುತ್ತಲೇ ಇರುತ್ತಾರೆ.

ಅಂತಾವರ ಬಗ್ಗೆ ಬಲು ಎಚ್ಚರ ವಹಿಸಿ ಒಗ್ಗಟ್ಟಿನ ಮಂತ್ರ ನಮ್ಮದನ್ನಾಗಿ ಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾದ್ದು ಬೇರೆ ಧರ್ಮದವರಿಗೂ ಸಾಧ್ಯವಾದಷ್ಟೂ ಸಮಾನ ಅವಕಾಶ ಕೊಟ್ಟು ಸೋದರ ಭಾವದಿಂದ ಅನೇಕತೆಯಲ್ಲಿ ಏಕತೆ ಎಂದು ವಿಶ್ವಕ್ಕೆ ಸಾರಿ ಸಾಧಿಸಿ ತೋರಿಸಬೇಕಾದ್ದು ಇಂದಿನ ಹಿಂದೂಗಳಾದ ನಮ್ಮೆಲ್ಲರ ಕರ್ತವ್ಯ...! ನಾವು ಈ ದೇಶ ಹಿಂದೂಗಳಿಗೆ ಆಗಿದ್ದು ಇದು ನಮ್ಮದೇ ಹೊರತು ಬೇರೆ ಜಾತಿ ಧರ್ಮದವರಿಗೆ ಇಲ್ಲಿ ಅವಕಾಶವಿಲ್ಲ ಎನ್ನುವುದಾದರೆ ಬೇರೆ ಬೇರೆ ದೇಶಗಳಲ್ಲಿ ತಮ್ಮ ಹೊಟ್ಟೆ ಪಾಡಿಗಾಗಿ ಅಭಿವೃದ್ಧಿಗಾಗಿ ಕೆಲಸ ಅರಸಿ ಹೋಗಿ ಈ ನಮ್ಮ ದೇಶಕ್ಕೂ ಆರ್ಥಿಕ ಅಭಿವೃದ್ಧಿಗೆ ಕಾರಣೀಭೂತರಾಗಿರುವ ಲಕ್ಷಾಂತರ ಹಿಂದೂ ಗಳಿಗೆ ವಾಪಸ್ ಕರೆದು ಈ ದೇಶದಲ್ಲೇ ಅವರವರ ಯೋಗ್ಯತೆಗನುಸಾರ ಕೆಲಸ ಒದಗಿಸಿ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಆ ಸೌಕರ್ಯ ಮತ್ತು ಅವಕಾಶ ನೀಡುವ ಯೋಗ್ಯತೆ ನಮ್ಮ ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಆದ್ದರಿಂದ ಇಡೀ ವಿಶ್ವವೇ ಈ ಮನುಕುಲಕ್ಕೆ ಸೇರಿದ್ದು ಎಲ್ಲಕ್ಕಿಂತ ಮಿಗಿಲಾದದ್ದು ಮಾನವೀಯತೆ ಮತ್ತು ವಿಶ್ವ ಬ್ರಾತೃತ್ವ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಎಲ್ಲಿ ಯಾರು ಇರುತ್ತಾರೋ ಅಲ್ಲೇ ಇದ್ದರೂ ಅವರ ನಾಡಿನ ಧರ್ಮಗಳಿಗೆ ಗೌರವ ಕೊಟ್ಟು ನಮ್ಮ ತನವನ್ನೂ ಮರೆಯದೆ ಸಹಬಾಳ್ವೆಯ ಮಂತ್ರ ನಮ್ಮದಾಗಿಸಿಕೊಂಡು ಮುನ್ನಡೆಯುತ್ತೇವೆಯೋ ಆಗಲೇ ಈ ಮನುಕುಲದ ಏಳಿಗೆ ಮತ್ತು ಉದ್ಧಾರ ಆಗುವುದು ಎಂದು ನನ್ನ ಭಾವನೆ.

ಈ ಲೇಖನ ಹೇಗಿದೆ?: 
ಅಂಕಗಳು: 1 (1 ಓಟು)

ಲೇಖನದ ಬಗೆ: 

Subscribe to Comments for "ನಮ್ಮ ನಮ್ಮಲ್ಲೇ ಈ ಕಚ್ಚಾಟ ಬೇಕೇ..?"