ಅಮ್ಮಾ ನೀ different

ಅಮ್ಮಾ 
ನೀ different

ನಾನು ಇಡಿಯಾಗಿ ನೆಂದ

ಜೋರು ಮಳೆಯ ರಾತ್ರಿ

ಮನೆಯೊಳಗೆ ಕಾಲಿಡುತ್ತಲೆ

ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ"

 

ದಾವಣಿ ಸರಿಪಡಿಸುತ್ತಾ ಬಂದು

ಪಿಸುಗುಟ್ಟಿದಳು ತಂಗಿ

ಮಳೆ ನಿಲ್ಲುವವರೆಗೆ ತಡೆದು

 ಬರಬಾರದಿತ್ತೇ ಕಮಂಗಿ"

 

ಅಶ್ಟರಲ್ಲಿ ಗುಡುಗುಟ್ಟಿತು

ಅಪ್ಪನ ಘಡಸು ಧ್ವನಿ

" ಶೀತಜ್ವರ ಬಂದರೆ ದುಡ್ದಿಡಬೇಕು

  ಹುಡುಗಾಟ ಬಿಡೋ ಶನಿ"

 

ಮೄದು ಕೈಯಲಿ ತಲಿ ಒರೆಸುತ್ತಾ

ಅಮ್ಮ ದೂರಿದಳು ಮಮತೆಯಲಿ

"ಹಾಳು ಮಳೆಯೇ ತಡಿಯಬಾರದಿತ್ತೇ

 

 ಮಗ ಕಾಲಿಡುವ ತನಕ ಮನೆಯಲಿ" 

ಈ ಲೇಖನ ಹೇಗಿದೆ?: 
ಅಂಕಗಳು: 5 (1 ಓಟು)

ಲೇಖನದ ಬಗೆ: 

ಅನಿಸಿಕೆಗಳು

Sameer Naragund's picture

mast kavan

Subscribe to Comments for "ಅಮ್ಮಾ  ನೀ different"