ಕೊಡೆ-ಮುಸುಕು

(ಕಮಲಾ ದಾಸ ಅವರ
"
Umbrellas in the
rain" ಕವನದ ನನ್ನ ಕನ್ನಡ ಅವತರಿಣಿಕೆ)

ಕೊಡೆ-ಮುಸುಕು

ನೋಡಿದಲ್ಲಿ
ಬಣ್ಣ ಬಣ್ಣದ ಕೊಡೆಗಳ
 

ಪ್ರಭಾತ
ಫೇರಿ


ಇನ್ನೂ ಮಳೆ ಬಾಕಿ ಇದೆ

ನನಗೆ
ವಿಸ್ಮಯ
,

ಕೊಡೆಗಳ
ಕೆಳಗೆ

ಎನೋ
ಮರೆಮಾಚಿದಂತಿದೆ

ಅವರ
ಬದುಕು ನೋವುಗಳಿಂದ

ಕದಡಿದಂತಿದೆ

ಬೂದು
ಬಣ್ಣದ ಆಕಾಶದ ಕೆಳಗೆ

ಕೊಡೆ
ಕೆಳಗೆ

ಆರ್ತನಾದ
ಕೇಳಿಸುತ್ತದೆ

ಇದು
ನನ್ನ ಕಣ್ಣಿಗೆ ಯಾವ

ಸಂದೇಶದ
ಆಶಯ ಹೇಳುತ್ತಿದೆಯೋ
?

ಈ ಕೊಡೆಗಳ
ಕೆಳಗಿನ

ಈ ದೇಹಗಳು

ಯಾವ
ತೀರಕ್ಕೆ ಹೊರಟಿರುವವೋ
?

ನನಗನಿಸುತ್ತದೆ,

ಅವರು
ತಮ್ಮನ್ನು

ಬರೀ
ಮಳೆಯಿಂದ ಮುಚ್ಚಿಡಲು

ಕೊಡೆ
ಹಿಡಿದಿಲ್ಲ

ಇದು
ನನ್ನ ವಿಚಾರವಷ್ಟೆ

 

ತಪ್ಪು
ಗ್ರಹಿಕೆಯೂ ಇರಬಹುದು

ಈ ಲೇಖನ ಹೇಗಿದೆ?: 
ಅಂಕಗಳು: 5 (1 ಓಟು)

ಲೇಖನದ ಬಗೆ: 

Tags: 

Subscribe to Comments for "ಕೊಡೆ-ಮುಸುಕು"